ಪತ್ರಕರ್ತ ಸಿ.ವಾಸುದೇವಮೂರ್ತಿ ರವರಿಗೆ ನುಡಿ ನಮನ

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ 400 ಫಾರ್ಮಸಿ ಅಧಿಕಾರಿಗಳು ಹಾಗೂ 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಇತ್ತೀಚಿಗೆ ನಿಧನರಾದ ದೊಡ್ಡಬಳ್ಳಾಪುರದ ಪತ್ರಕರ್ತರು (ಶ್ರೀವಾಣಿ ಪತ್ರಿಕೆ ಸಂಪಾದಕರು) ಆದ ಸಿ .ವಾಸುದೇವಮೂರ್ತಿ ರವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ನುಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜೆ.ಎಸ್. ನರಸಿಂಹಸ್ವಾಮಿ ರವರು ಅಗಲಿದ ಸಿ.ವಾಸುದೇವಮೂರ್ತಿ ರವರಿಗೆ ಅಂತಿಮ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿ ಆರ್ ರಮೇಶ್ 90ರ ದಶಕದಲ್ಲಿ ಬೆರಳೆಣಿಕೆಯಷ್ಟು ಪತ್ರಿಕೆಗಳ ಸಾಲಿನಲ್ಲಿ ಶ್ರೀ ವಾಣಿ ಪತ್ರಿಕೆಯು ಒಂದು.

ಸಮಾಜಮುಖಿ ಲೇಖನಗಳ ಮೂಲಕ ಜನರ ಗಮನ ಸೆಳೆದಿದ್ದ ವಾಸುದೇವಮೂರ್ತಿ ರವರು ಮೂಲತ‌ಹ ಕೇಬಲ್ ಆಪರೇಟರ್ ಆಗಿದ್ದರು. ಅಂದಿನ ಕಾಲದಲ್ಲೇ ಸ್ಥಳೀಯ ಕೇಬಲ್ ವಾಹಿನಿಯನ್ನು ನೆಡೆಸುತ್ತಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅದ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕರಾದ ಆರ್.ಸತೀಶ್ ಮಾತನಾಡಿ, ನಾವುಗಳಿಬ್ಬರು ಒಂದೇ ಪೇಟೆಯವರಾಗಿದ್ದು ವಾಸುದೇವಮೂರ್ತಿ ರವರು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ನಗರದಲ್ಲಿ ಪತ್ರಕರ್ತರಾಗಿ ಉತ್ತಮ ಹೆಸರು ವ್ಯಕ್ತಿತ್ವ ಉಳ್ಳವರಾಗಿದ್ದಾರೆ ಎಂದರು.

ಈ ವೇಳೆ ಪತ್ರಕರ್ತರಾದ ರಾಜು ಸಣ್ಣಕ್ಕಿ, ಜೆ.ಮುನಿರಾಜು, ರಹೀಂ, ಎ.ಉಮೇಶ್, ಕೊತ್ತೂರಪ್ಪ, ಗುರುಪ್ರಸಾದ್, ರಾಘವೇಂದ್ರ, ನವೀನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *