ಬೆಂಗಳೂರಿನ ಗಾಂಧಿ ಭವನ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಸಿದ ಮಾಜಿ ಸಚಿವ ಎಸ್.ಟಿ.ಸೋಮಶೇಖರ್.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ನಂತರ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಳಿ ಮಾತನಾಡಲು ಭೇಟಿಯಾಗಿದ್ದೇನೆ. ಭೇಟಿಯಾಗಿ ಕೆಂಗೇರಿ ಬ್ರಿಡ್ಜ್, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ಹೆಚ್ಚುವರಿ ಹೆರಿಗೆ ಆಸ್ಪತ್ರೆ ನಿರ್ಮಾಣ, ಕಾವೇರಿ ನೀರನ್ನ ವಾರಕ್ಕೆ ಮೂರು ದಿನ ಎಕ್ಸೆಸ್ ಆಗಿ ಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಯಾರಿಗೆಲ್ಲಾ ಕಾಂಗ್ರೆಸ್ ಸೇರೋದಕ್ಕೆ ಆಸೆ ಅವರು ಸೇರುತ್ತಾರೆ. ನನ್ನ ಬೆಂಬಲಿಗರು ಹೋಗುತ್ತಿಲ್ಲ. ಕೆಲ ಕಾರ್ಪೋರೇಟರ್ ಗಳು ಹೋಗುತ್ತಿದ್ದಾರೆ ಅಷ್ಷೆ. ನನಗೆ ಪಕ್ಷದ ಮೇಲೆ ಅಸಮಧಾನ ಇಲ್ಲ. ಕ್ಷೇತ್ರದ ವಿಚಾರವಾಗಿ ಅಸಮಧಾನ ಇದೆ ಅಷ್ಟೇ. ಈಗಾಗಲೇ ಸಿಟಿ ರವಿ, ಆರ್.ಅಶೋಕ್ ಮಾತಾಡಿ ಸರಿಪಡಿಸಿದ್ದಾರೆ ಎಂದರು.