ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಕುಂಠಿತ: ಸಾರ್ವಜನಿಕರ ಪರದಾಟ

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇ-ಆಫೀಸ್ ಅನುಷ್ಠಾನ ಹಾಗೂ ಆರ್‌ಸಿಸಿಎಂಎಸ್ ಕಾರ್ಯ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕ ಕೆಲಸ ಕುಂಠಿತಗೊಂಡಿದೆ.

ಉಪವಿಭಾಗಾಧಿಕಾರಿ ಕಚೇರಿಗೆ ಪ್ರತಿನಿತ್ಯ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಿಂದ ಜನರು ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಬಂದು ಹೋಗುತ್ತಾರೆ.

ಎಸಿ ಕಚೇರಿಯಲ್ಲಿ ಆಗಸ್ಟ್ 17 ಮತ್ತು 18ರಂದು ಇ-ಆಫೀಸ್ ಅನುಷ್ಠಾನ ಹಾಗೂ ಆರ್‌ಸಿಸಿಎಂಎಸ್ ಕಾರ್ಯನಿರ್ವಹಣೆ ಪ್ರಗತಿಯಲ್ಲಿರುವುದರಿಂದ ಕಚೇರಿ ಸಿಬ್ಬಂದಿ ತಮ್ಮನ್ನು ಭೇಟಿ ಮಾಡಲು ಸಾಧ್ಯವಿರುವುದಿಲ್ಲ ಆದ್ದರಿಂದ ಸಾರ್ವಜನಿಕರು ಸಹಕರಿಸಿ ಗೋಡೆ ಪ್ರಕಟಣೆಯನ್ನು ಪ್ರಕಟಿಸಿದ್ದು ಬಿಟ್ಟರೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಒದಗಿಸಿರುವುದಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ.

ತಮ್ಮ ಕೆಲಸಕ್ಕಾಗಿ ನೆಲಮಂಗಲ ತಾಲೂಕಿನ ಗಡಿ ಗ್ರಾಮದಿಂದ ಬಂದಿದ್ದ ನಾರಾಯಣಸ್ವಾಮಿ ಮಾತನಾಡಿ, ಕಳೆದ ಎರಡು ದಿನಗಳಿಂದ ಎಸಿ ಕಚೇರಿಗೆ ಕೆಲಸದ ನಿಮಿತ್ತ ಬರುತ್ತಿದ್ದೇನೆ ನಿನ್ನೆಯ ದಿನ ಗೋಡೆ ಬರಹವನ್ನು ನೋಡಿ ವಾಪಸ್ ತೆರಳಿದ್ದೇನೆ ನಿನ್ನೆ(ಶನಿವಾರ) ಕಚೇರಿಗೆ ಬಂದರೂ ಉಪವಿಭಾಗಾಧಿಕಾರಿ ಅವರು ಕಚೇರಿಯಲ್ಲಿ ಇದ್ದರೂ ಸಾರ್ವಜನಿಕರಿಗೆ ಸಿಗದೇ ಮುಂದಿನ ವಾರ ಬನ್ನಿ ಎಂದು ಹಾರಿಕೆ ಹೇಳಿಕೆ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಯಾವುದಾದರೂ ಕೆಲಸವಿದ್ದರೇ ಅದನ್ನು ಬಹಿರಂಗವಾಗಿ ಪತ್ರಿಕಾ ಹೇಳಿಕೆ ಮುಖಾಂತರ ಸಾರ್ವಜನಿಕರಿಗೆ ಮುಟ್ಟಿಸಿದರೆ ದೂರದ ಊರುಗಳಿಂದ ಬರುವ ಜನ ತಮ್ಮ ಬೇರೆ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಅಧಿಕಾರಿಗಳು ಸಾರ್ವಜನಿಕ ಸ್ನೇಹಿ ಕೆಲಸ‌ ಮಾಡದೇ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *