ದೊಡ್ಡಬಳ್ಳಾಪುರ ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಪರಮೇಶ್ ಅವರು ಇಂದು ನಗರಸಭೆ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು.
ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರಾಗಿದ್ದ ಕೆ.ಜಿ.ಶಿವಶಂಕರ್ ಅವರನ್ನು ಗೌರಿಬಿದನೂರು ನಗರಸಭೆ ಪರಿಸರ ಅಭಿಯಂತರರನ್ನಾಗಿ ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿತ್ತು. ಪೌರಾಯುಕ್ತ ಶಿವಶಂಕರ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚೆನ್ನಗಿರಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಕೆ.ಪರಮೇಶ್ ಅವರನ್ನು ದೊಡ್ಡಬಳ್ಳಾಪುರ ನೂತನ ಪೌರಾಯುಕ್ತರನ್ನಾಗಿ ನೇಮಿಸಲಾಗಿತ್ತು. ಈ ಹಿನ್ನೆಲೆ ಇಂದು ಅಧಿಕಾರ ಸ್ವೀಕರಿಸಿದ ಕೆ.ಪರಮೇಶ್.