ಬಿಬಿಎಂಪಿ ವ್ಯಾಪ್ತಿಯ 45 ಕಂದಾಯ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಯುಟಿಲಿಟಿ ಬಿಲ್ಡಿಂಗ್ ನಲ್ಲಿರುವ ದೊಂಬ್ಲೂರು ARO, ಶಾಂತಿನಗರ ARO ಮತ್ತು ಟೌನ್ ಪ್ಲಾನಿಂಗ್ ಕಚೇರಿ ಮೇಲೆ ಲೋಕಾಯುಕ್ತ ರೇಡ್ ನಡೆಸಲಾಗಿದೆ.

ಇನ್ಸ್ಪೆಕ್ಟರ್ ಅಂಜನ್ ಮೂರ್ತಿ ಸೇರಿ ಹಲವು ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ARO ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು.

ಖುದ್ದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ರಿಂದ ರಾಜಾಜಿನಗರ ರೆವಿನ್ಯೂ ಆಫೀಸ್ ನಲ್ಲಿ ಕಡತಗಳ ಪರಿಶೀಲನೆ ನಡೆದಿದೆ.

ಫೈಲ್ ಗಳು ಏಕೆ ಕ್ಲಿಯರ್ ಆಗಿಲ್ಲ ಎಂದು ಎಆರ್ ಓ ಭಾರತಿ ಹಾಗೂ ಮ್ಯಾನೇಜರ್‌ ರುಕ್ಮಿಣಿಗೆ ತರಾಟೆಗೆ ತೆಗೆದುಕೊಳ್ಳಲಾಗಿದೆ.

ದಾಖಲೆ ಹಾಗೂ ರಿಜಿಸ್ಟ್ರೇಶನ್ ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಖುದ್ದು ಬಿ.ಎಸ್ ಪಾಟೀಲ್ ಅವರು ಕರೆ ಮಾಡಿ ವಿಚಾರಣೆ ಮಾಡಿದ್ದಾರೆ‌.

ಎಷ್ಟು ಅಪ್ಲಿಕೇಷನ್ ಪೆಂಡಿಂಗ್ ಇದೆ ಏಕೆ ಕೆಲಸಗಳು ಬಾಕಿ ಇವೆ ಎಂದು ಅಧಿಕಾರಿಗಳಿಗೆ ವರದಿ ಕೇಳಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ‌.ಎಸ್‌. ಪಾಟೀಲ್. ಅದೇರೀತಿ ಕಚೇರಿಯಲ್ಲಿ ನಗದು ಇಡಲಾಗಿದಿಯೇ ಎಂದು ಪರಿಶೀಲನೆ ನಡೆಸುವಂತೆ ಲೋಕಾಯುಕ್ತ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಇಂದು ಬಿಬಿಎಂಪಿಯ 45 ಕಂದಾಯ ಕಚೇರಿಗಳ ಮೇಲೆ ಸರ್ಪ್ರೈಸ್ ಇನ್ಸ್ಪೆಕ್ಷನ್ ನಡೆಸಲಾಗಿದೆ. 100 ಕ್ಕೂ ಹೆಚ್ಚು ಅಧಿಕಾರಿಗಳಿಗಳನ್ನ ಇದಕ್ಕೆ ನಿಯೋಜನೆ ಮಾಡಿದ್ದೇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನ ಎಲ್ಲ ವಲಯಗಳಲ್ಲೂ ರೈಡ್ ನಡೆದಿದೆ. ಅಧಿಕಾರಿಗಳಿಗೆ ಸರ್ಚ್ ವಾರೆಂಟ್ ನೀಡಿ ಕಳಿಸಲಾಗಿದೆ ರೈಡ್, ಸರ್ಚ್, ಸೀಸಿಂಗ್ ಎಲ್ಲವೂ ಆಗಿದೆ ಎಂದರು.

ಕಾನೂನಿನ ಉಲ್ಲಂಘನೆ ಎಲ್ಲಿ ಆಗುತ್ತಿದೆ,ಎಲ್ಲಿಲ್ಲಿ ತಡವಾಗಿ ಕೆಲಸ ಆಗುತ್ತಿದೆ, ಸಾರ್ವಜನಿಕರಿಗೆ ಯಾವ ರೀತಿ ತೊಂದರೆ ಆಗುತ್ತಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗಿದೆ‌‌ ನಮಗೆ ದೂರು ಬಂದ ಕಾರಣದಿಂದ ನಾವು ರೈಡ್ ಮಾಡುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *