ಜಾಮೀನು ಕೊಡಿಸಲು ವಕೀಲರನ್ನೇ ಕಿಡ್ನ್ಯಾಪ್: ವಕೀಲರನ್ನ ಕಿಡ್ನ್ಯಾಪ್ ಮಾಡಿದ ರೌಡಿಶೀಟರ್

ಜಾಮೀನು ಕೊಡಿಸಲು ವಕೀಲರನ್ನೆ ಕಿಡ್ನ್ಯಾಪ್ ಮಾಡಿದ್ದ ರೌಡಿಶೀಟರ್. ವಕೀಲ ಗಿರಧರ್ ಎಂಬುವವರನ್ನ ಕಿಡ್ನ್ಯಾಪ್ ಮಾಡಿ ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ಕೂರಿಸಿ ರಾತ್ರಿ ಇಡೀ ಕಾರಿನ ಜಾಕ್ ರಾಡ್ , ಸ್ಪಾನರ್ ನಿಂದ ಹಲ್ಲೆ ಮಾಡಿ 8 ಜನರಿಗೆ ಬೇಲ್ ಕೊಡಿಸಬೇಕು ಹಾಗೂ 5 ಲಕ್ಷ ಹಣ ತಂದುಕೊಡಬೇಕೆಂದು ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ರೌಡಿ ಶೀಟರ್ ರಾಜೇಶ್ @ ಕೋಳಿ ರಾಜೇಶ್, ಹರ್ಷಿತ್@ಆಪಲ್, ಜಾನ್, ಭರತ್.

ಬೆಳಗಿನ ಜಾವದವರೆಗೂ ಹಲ್ಲೆ ನಡೆಸಿ 10 ಸಾವಿರ ಹಣ ಪೀಕಿದ್ದ ಆರೋಪಿಗಳು. ಈ ವಿಷಯ ಪೊಲೀಸರಿಗೆ ಹೇಳಿದರೆ ಅಥವಾ ಹಣ ಕೊಡದಿದ್ದರೆ ಹುಡುಗರನ್ನ ಬಿಟ್ಟು ಕೊಲೆ ಮಾಡಿಸೋದಾಗಿ ಬೆದರಿಕೆಯನ್ನ ಹಾಕಿದ್ದ ರೌಡಿಗಳು.

ವಕೀಲರ ದೂರಿನನ್ವಯ ಕೋಳಿ ರಾಜೇಶ್ , ಹರ್ಷಿತ್@ ಆಪಲ್ ಬಂಧನ ಮಾಡಲಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *