ಪ್ಲಾಸ್ಟಿಕ್ ನಿಷೇಧ: ಪ್ಲಾಸ್ಟಿಕ್ ಬಳಕೆದಾರರ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ದಿಢೀರ್ ದಾಳಿ: 9 ಕೆಜಿ ಪ್ಲಾಸ್ಟಿಕ್ ವಶ: ಪ್ಲಾಸ್ಟಿಕ್ ಬಳಕೆದಾರರಿಗೆ 2,200‌ ದಂಡ

ದೊಡ್ಡಬಳ್ಳಾಪುರ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪಣತೊಟ್ಟಿರೋ ನಗರಸಭೆ ಇಂದು ಬೆಳ್ಳಂಬೆಳಗ್ಗೆ ಡಿ.ಕ್ರಾಸ್ ರಸ್ತೆಯಲ್ಲಿ ನಿಷೇಧವಾಗಿರೋ ಪ್ಲಾಸ್ಟಿಕ್ ಬಳಕೆದಾರರ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 9 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು, 2,200ರೂ. ದಂಡ ವಿಧಿಸಲಾಯಿತು.

ಆರೋಗ್ಯ ಶಾಖೆಯ ಈರಣ್ಣ ನೇತೃತ್ವದಲ್ಲಿ ಡಿ.ಕ್ರಾಸ್ ಬಳಿಯ ಅಂಗಡಿಗಳ‌ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಬಳಸದಂತೆ ಹಾಗೂ ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಖಡಕ್ ಸೂಚನೆ ನೀಡಿದರು.

ಈ ವೇಳೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *