ಸಹಕಾರಿ ಸಂಘಗಳು ಗ್ರಾಮೀಣ ಜನರ ಉಸಿರು: ಶಾಸಕ ಧೀರಜ್‌ ಮುನಿರಾಜ್

ಸಹಕಾರ ಸಂಘಗಳು ಗ್ರಾಮೀಣ ಭಾಗದ ಉಸಿರಾಗಿದ್ದು ಅವುಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ಧಾರಿ ಹೊರಬೇಕು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಎಸ್.ಎಂ ಗೊಲ್ಲಹಳ್ಳಿ
ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ
ಸಂಘದ ಮೊದಲ ಅಂತಸ್ತಿನ ನೂತನ ಕಟ್ಟಡ ಹಾಗೂ ಪೀಠೋಪಕರಣಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಸರ್ಕಾರಕ್ಕೆ ಸರಿಸಮನಾಗಿ ಸಹಕಾರಿ ಸಂಘಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್, ಪಿಎಲ್‌ಡಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘಗಳು ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿವೆ. ನನ್ನ ಅವಧಿಯಲ್ಲಿಯೂ ಅಗತ್ಯವಿರುವ ಎಂಪಿಸಿಎಸ್ ಗಳಿಗೆ ಅನುದಾನ ಬಿಡುಗಡೆ ಮಾಡಿ ರೈತರಿಗೆ ಸಹಕಾರ ನೀಡಲಾಗುತ್ತದೆ ಎಂದರು.

ನಂತರ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯು ಆದಾಯದ ಮೂಲವಾಗಿದ್ದು, ಯುವಜನತೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಹೈನುಗಾರರು ಸಂಕಷ್ಟದಲ್ಲಿದ್ದಾರೆ. ಪಶು ಆಹಾರದ ದರ ಇಳಿಕೆಗೆ ಅಗತ್ಯ ಕ್ರಮವನ್ನು ಸರ್ಕಾರ ವಹಿಸಬೇಕು. ಇಂದಿನ ಯುವ ಜನಾಂಗ ಹೈನುಗಾರಿಕೆಯಿಂದ ದೂರವಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾ ವಕ್ತಾರೆ ಪುಷ್ಪಾಶಿವಶಂಕರ್, ಅರಳು ಮಲ್ಲಿಗೆ ಗ್ರಾ.ಪಂ ಅಧ್ಯಕ್ಷ ವೆಂಕಟೇಶ್, ಎಂಪಿಸಿಎಸ್ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ಕುಮಾರ್, ಒಕ್ಕೂಟ ಉಪ ವ್ಯವಸ್ಥಾಪಕ ಎಲ್ ಬಿ ನಾಗರಾಜು, ಮುನಿರಾಜೇಗೌಡ, ಗೊಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಕೆ. ಹನುಮಂತರಾಯಪ್ಪ, ಉಪಾಧ್ಯಕ್ಷ ಶಿವಣ್ಣ, ಎಂಪಿಸಿಎಸ್ ನಿರ್ದೇಶಕ ಮಲ್ಲೇಶ್, ವೀರಕೆಂಪಣ್ಣ, ಡೇರಿ ಮುಖ್ಯಕಾರ್ಯನಿರ್ವಹಾಕ ಕೆಂಪಣ್ಣ, ಗ್ರಾ.ಪಂ ಸದಸ್ಯರು
ಮತ್ತಿತರರು ಇದ್ದರು.

Leave a Reply

Your email address will not be published. Required fields are marked *