ಅಡುಗೆ ಎಣ್ಣೆ ಸಾಗಿಸುವ ಟೆಂಪೋ ನಡುರಸ್ತೆಯಲ್ಲಿ ಪಲ್ಟಿ; ನಾಯಕರಂಡನಹಳ್ಳಿ ಗೇಟ್ ಸಮೀಪ ಘಟನೆ

ಅಡುಗೆ ಎಣ್ಣೆ ಸಾಗಿಸುವ ಟೆಂಪೋ ನಡುರಸ್ತೆಯಲ್ಲಿ ಪಲ್ಟಿಯಾಗಿರುವ ಘಟನೆ ಇಂದು ಬೆಳಗಿನಜಾವ ಸುಮಾರು 5ಗಂಟೆಗೆ ತಾಲೂಕಿನ ನಾಯಕರಂಡನಹಳ್ಳಿ ಗೇಟ್ ಸಮೀಪ ನಡೆದಿದೆ.

ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಹೋಗುವ ವೇಳೆ ಇದ್ದಕ್ಕಿದ್ದಂತೆ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿ ಪಲ್ಟಿ ಹೊಡೆದಿದೆ.

ಸುಮಾರು ‌ಮೂರು ಸಾವಿರ ಲೀಟರ್ ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟೆಂಪೋ ಇದಾಗಿದೆ, ಪಲ್ಟಿ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂಗೊಂಡಿದೆ‌.ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ಘಟನೆ ನಡೆದು ಹಲವು ಗಂಟೆಗಳು ಕಳೆದರೂ ಟೆಂಪೋ ನಡು ರಸ್ತೆಯಲ್ಲೇ ಇರುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *