ಎಂದಿನಂತೆ ಬಿಎಂಟಿಸಿ ಬಸ್ ಚಾಲಕ ತನಗೆ ನೀಡಿರುವ ರೂಟ್ ನಲ್ಲಿ ಬಸ್ ಚಾಲನೆ ಮಾಡಿಕೊಂಡು ಹೋಗವಾಗ ಮಾರ್ಗ ಮಧ್ಯೆ ಹಠಾತ್ ನೆ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಇದನ್ನು ಕಂಡ ಎಸಿಪಿ ರಾಮಚಂದ್ರರವರು ಬಸ್ ಚಾಲಕನನ್ನು ಆಸ್ಪತ್ರೆಗೆ ರವಾನಿಸಿ ಪ್ರಯಾಣಿಕರ ಹಿತದೃಷ್ಟಿಯಿಂದ ಸ್ವತಃ ತಾವೇ ಬಸ್ ಚಾಲನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಶಿವಾಜಿ ನಗರ-ಕಾಡುಗೋಡಿ ಮಾರ್ಗದ ಬಿಎಂಟಿಸಿ ಬಸ್ ಡ್ರೈವರ್ ಗೆ ಚಾಲನೆ ವೇಳೆ ಅನಾರೋಗ್ಯಕ್ಕೆ ತುತ್ತು. ಅನ್ಯಾರೋಗ್ಯ ಹಿನ್ನೆಲೆ ಓಲ್ಡ್ ಏರ್ ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಸ್ಸ್ ನಿಲ್ಲಿಸಿದ ಬಸ್ ಚಾಲಕ. ಇದನ್ನು ಕಂಡ ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನೆಲೆ ಓಲ್ಡ್ ಏರ್ ಪೊರ್ಟ್ ರಸ್ತೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸಿಪಿ ರಾಮಚಂದ್ರ. ಬಿಎಂಟಿಸಿ ಬಸ್ ಚಾಲಕನನ್ನು ಅಂಬುಲೈನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ರವಾನಿಸಿ, ಪ್ರಯಾಣಿಕರ ಹಿತದೃಷ್ಟಿಯಿಂದ ಸ್ವತಃ ತಾವೇ ಒಂದು ಕಿಲೋ ಮೀಟರ್ ದೂರದವರೆಗೆ ಬಸ್ ಚಾಲನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಸದ್ಯ ಎಸಿಪಿ ಅವರು ಬಸ್ ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಎಸಿಪಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.