ವಿಶ್ವದ ಅತ್ಯಂತ ಹಳೆಯ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಾದ ವಿಂಬಲ್ಡನ್ ಓಪನ್ ಫೈನಲ್ ಪಂದ್ಯದಲ್ಲಿ 23 ಗ್ರಾಂಡ್ ಸ್ಲಾಮ್ ಒಡೆಯ ಸರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಗೆಲವು ಸಾಧಿಸುವ ಮೂಲಕ ಸ್ಟೇನ್ ನ 20 ವಷ೯ದ ಕಾರ್ಲೋಸ್ ಅಲ್ಕರಾಜ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿಂಬಲ್ಡನ್ನಲ್ಲಿ ಈಗಾಗಲೇ 8 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಜೊಕೊವಿಕ್ ಅವರಿಗೆ ಈ ಬಾರಿ ಗೆಲ್ಲುವುದು ಅಷ್ಟು ಸುಲಭವಾಗಿರಲಿಲ್ಲ, ಸ್ಟೇನ್ ನ ಯುವ ಆಟಗಾರನ ಅದ್ಭುತ ಪ್ರದರ್ಶನದಿಂದಾಗಿ 1-6, 7-6, 6-1, 3-6, 6-4 ಸೆಟ್ ಗಳ ಅಂತರದಲ್ಲಿ ಸೋತು ಆಘಾತ ಅನುಭವಿಸಿದರು ಜೊತೆಗೆ ತಮ್ಮ 24ನೇ ಗ್ರ್ಯಾಂಡ್ ಸ್ಲಾಮ್ ಕನಸು ನನಸಾಗಲಿಲ್ಲ.
36 ವಷ೯ದ ನೋವಕ್ ಜೊಕೊವಿಕ್ ಎದುರು 20 ವಷ೯ದ ಕಾರ್ಲೋಸ್ ಅಲ್ಕರಾಝ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಅವರಿಗೆ ಇದು ಎರಡನೇ ಗ್ರ್ಯಾಂಡ್ ಸ್ಲಾಮ್ ಈ ಮೊದಲು 2022 ರಲ್ಲಿ ಯುಎಸ್ ಓಪನ್ ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
4 ಗಂಟೆ 42 ನಿಮಿಷ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಗೆದ್ದ ಅಲ್ಕರಾಝ್ ಅವರಿಗೆ 26 ಕೋಟಿ ರೂಪಾಯಿ ಹಾಗೂ ರನ್ನರ್ ಆಫ್ ನೋವಕ್ ಜೊಕೊವಿಕ್ ಅವರಿಗೆ 12 ಕೋಟಿ ರೂಪಾಯಿ ಬಹುಮಾನ ವಿತರಿಸಲಾಯಿತು.
ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ನಂತರ ಮಾತನಾಡಿದ ಅಲ್ಕರಾಜ್ ನಾನು ಹುಟ್ಟಿದ ವೇಳೆಯಲ್ಲಾಗಲೇ ಜೊಕೊವಿಕ್ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದರು, ಅವರನ್ನು ನೋಡಿ ಟೆನ್ನಿಸ್ ಪಂದ್ಯಗಳನ್ನು ಆಡಲು ಕಲಿತೆ, ಅವರೇ ನನಗೆ ಸ್ಫೂರ್ತಿ ಎಂದು ಅವರು ಹೇಳಿದರು.
ಈಗಾಗಲೇ ಸ್ಪೇನ್ ನ ರೋಜರ್ ಫೆಡರರ್ ನಿವೃತ್ತಿ ಘೋಷಿಸಿದ್ದು ಮುಂದಿನ ದಿನಗಳಲ್ಲಿ ಟೆನ್ನಿಸ್ ಅಂಗಳದಲ್ಲಿ ಯುವ ಆಟಗಾರನ ಅದ್ಭುತ ಪ್ರದರ್ಶನವನ್ನು ಕಾಣಬಹುದಾಗಿದೆ.