ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಸೇರಿ ಒಮ್ಮತವಾಗಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
22 ಜನ ಸದಸ್ಯರಿರುವ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚಿಕ್ಕಮುದ್ದೇನಹಳ್ಳಿಯ ನಂಜಮ್ಮ ನರಸಿಂಹ ಮೂರ್ತಿ ಮತ್ತು ಬಿಸಿಎಂ ಮೀಸಲು ನಿಗದಿಯಾಗಿದ್ದ ಉಪಾಧ್ಯಕ್ಷರಾಗಿ ವರಲಕ್ಷ್ಮೀ ಕೃಷ್ಣಮೂರ್ತಿ ಸೋತೇನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಅಧಿಕಾರಿಗಳಾಗಿ ರೇಷ್ಮೇ ಇಲಾಖೆಯ ಸಹಾಯಕ ನಿರ್ದೇಶಕರಾದ ಗಿರಿಜಾಂಬ.ಎಸ್ ಅವರು ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮುಖಂಡರಾದ ರಂಗಪ್ಪ, ಎಸ್.ಆರ್.ಮುನಿರಾಜು, ಅರವಿಂದ್, ರವಿಸಿದ್ದಪ್ಪ, ಸುರೇಶ್, ಕೃಷ್ಣಮೂರ್ತಿ (ಕಿಟ್ಟಿ), ನವೀನ್ ಕುಮಾರ್, ಗಂಗಾಧರ್, ನರಸಿಂಹಮೂರ್ತಿ ಯುವ ಮುಖಂಡರಾದ ಪ್ರತಪ್ ನವೀನ್ ಕುಮಾರ್, ಕೃಷ್ಣಮೂರ್ತಿ, ಮತ್ತು ಉದಯ ಆರಾಧ್ಯ ಮುಂತಾದವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.