ತಡರಾತ್ರಿ ಒಂಟಿ ಮನೆ ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಯತ್ನಿಸಿರುವ ಖದೀಮರು. ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದ ಹೊರವಲಯದ ಮುನಿಯಪ್ಪ ಮತ್ತು ರಾಮಕೃಷ್ಣ ಎಂಬುವವರ ತೋಟದ ಮನೆಯಲ್ಲಿ ಘಟನೆ.
ಮನೆಯ ಮಾಲೀಕರು ತಡರಾತ್ರಿ ಸುಮಾರು 8ಗಂಟೆ ಸಮಯದಲ್ಲಿ ನಾಯಿಗಳಿಗೆ ಊಟ ತರಲು ಎರಡು ಕಿಲೋಮೀಟರ್ ದೂರದ ಕೆಳಗಿನಜೂಗಾನಹಳ್ಳಿಗೆ ಹೋಗಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡು ಸೈಜ್ ಕಲ್ಲುಗಳಿಂದ ಬಾಗಿಲುಗಳಿಗೆ ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಮನೆಯ ಬಳಿ ನಾಲ್ಕು ನಾಯಿಗಳನ್ನು ಸಾಕಲಾಗಿದ್ದು, ಅವುಗಳನ್ನು ಹೊಡೆದು ಪ್ರಾಣಿ ಹಿಂಸೆ ಮಾಡಿ ಅಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಮಾತನಾಡಿದ ಮುನಿಯಪ್ಪ, ನಾವು ಸುಮಾರು 35 ವರ್ಷಗಳಿಂದ ಇಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಬೋರ್ ಹಾಕಿಸಿ ಮನೆ ಕಟ್ಟಿ ಇಲ್ಲೇ ವಾಸ ಮಾಡುತ್ತಿದ್ದೇವೆ. ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ. ತಡರಾತ್ರಿ ಮನೆಯಲ್ಲಿ ನಾವು ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಯಾರೋ ಗೊತ್ತಿರುವವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ