ಬೆಂಗಳೂರನ್ನ ನಿರ್ಮಾಣ ಮಾಡುವ ಜೊತೆಗೆ ಸಮಗ್ರ ಅಭಿವೃದ್ಧಿ ಸಾಕಾರಗೊಳಿಸಿದ ವ್ಯಕ್ತಿ ಕೆಂಪೇಗೌಡ- ಆರ್.ಗೋವಿಂದರಾಜು

ಬೆಂಗಳೂರನ್ನು ನಿಮಾರ್ಣ ಮಾಡುವುದರ ಜೊತೆಗೆ ಸಮಗ್ರ ಅಭಿವೃದ್ದಿಯನ್ನು ಸಾಕಾರಗೊಳಿಸಿದವರು ನಾಡಪ್ರಭು ಕೆಂಪೇಗೌಡ ಎಂದು ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು ತಿಳಿಸಿದರು.

ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಅವರ 514 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೆಂಪೇಗೌಡ ಅವರ ಸಮರ್ಥ ಆಡಳಿತ ನಡೆಸುವುದರೊಂದಿಗೆ ಬೆಂಗಳೂರನ್ನು ದೂರದೃಷ್ಟಿಯಲ್ಲಿ ಗಮನವಿಸರ್ವರಿಗೂ ಹಿತವಾಗುವಂತೆ ಅಭಿವೃದ್ಧಿಗೊಳಿಸಿದರು. ಕೆರೆಗಳು ನಿಮಾರ್ಣದಿಂದ ಕೃಷಿಗೆ ಸಹಕಾರವಾಯಿತು. ಹಲವು ಪೇಟೆಗಳ ನಿರ್ಮಾಣದಿಂದ ವಾಣಿಜ್ಯ ವ್ಯವಹಾರಗಳಿಗೆ ಪ್ರೋತ್ಸಾಹ ದೊರೆಯಿತು. ದೇವಾಲಯಗಳ ನಿಮಾರ್ಣವು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವಾದವು ಎಂದರು.

ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಗಿರೀಶ್ ಎನ್ ಬರಗೂರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ವೈಭವದ ಮಾದರಿಯಲ್ಲೇ ಬೆಂಗಳೂರನ್ನು ನಿರ್ಮಾಣ ಮಾಡಬೇಕೆಂಬುದು ನಾಡಪ್ರಭು ಕೆಂಪೇಗೌಡ ಅವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸುವ ಸಲುವಾಗಿ ಬೆಂಗಳೂರನ್ನು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಗೊಳಿಸಿದರು. ಸರ್ವ ಸಮುದಾಯಗಳು ಸೌಹಾರ್ದವಾಗಿ ಬದುಕುವಂತೆ ಮಾಡಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ರಂಗನಾಥ ಮಾತನಾಡಿ, ಬೆಂಗಳೂರು ಅಭಿವೃದ್ಧಿಯೊಂದಿಗೆ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿಯಾಗಲು ನಾಡಪ್ರಭು ಕೆಂಪೇಗೌಡ ಅವರ ಕೊಡುಗೆ ಅಪಾರವಾಗಿದೆ. ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಲು ಅಂದು ಕೆಂಪೇಗೌಡ ಅವರ ದೂರದೃಷ್ಟಿಯ ಕನಸು ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಎನ್.ದಿನೇಶ್, ಸಾದತ್ಉಲ್ಲಾಬೇಗ್, ರವಿಕುಮಾರ್, ಬೈರೇಗೌಡ, ಚೇತನಕುಮಾರ್, ಗೌರಿ, ರಂಜಿತ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Leave a Reply

Your email address will not be published. Required fields are marked *