ದೊಡ್ಡಬಳ್ಳಾಪುರ:ಭಾಷಾವಾರು ಪ್ರಾಂತಗಳು ರಚನೆಯಾಗಿ 50 ವರ್ಷಗಳು ಕಳೆದರೂ ಶಿವಸೇನೆ ಮತ್ತು ಎಂಇಎಸ್ ನ ಪುಂಡಾಟಿಕೆ ನಿಂತಿಲ್ಲ ಎಂದು ಕನ್ನಡ ಪಕ್ಷದ ರಾಜ್ಯ ಸಮಿತಿ ಸದಸ್ಯ ಸಂಜೀವ್ ನಾಯಕ ಅವರು ಆರೋಪಿಸಿದರು.ಮ
ಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸುಗಳಿಗೆ ಮಸಿ ಬಳಿದ ಎಂಇಎಸ್ ಮತ್ತು ಶಿವಸೇನೆಯ ಕಾರ್ಯಕರ್ತರ ನಡೆ ಖಂಡಿಸಿ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಕೃತಿ ದಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳ ಹಿಂದೆ ಬೆಳಗಾವಿ ಸುತ್ತಲಿನ 856 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು ಎಂದು ನ್ಯಾಯಮೂರ್ತಿ ಮಹಾಜನ್ ಅವರು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ, ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಮಹಾರಾಷ್ಟ್ರ ಸರ್ಕಾರ ಮತ್ತು ಕೆಲವು ಸಂಘಟನೆಗಳು ಪದೇ ಪದೇ ಖ್ಯಾತೆ ತೆಗೆಯುತ್ತಿವೆ.
ಈ ವಿಚಾರಕ್ಕೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇರುವುದರಿಂದ ಶಿವಸೇನೆ ಮತ್ತು ಎಂಇಎಸ್ ಪುಂಡರು ಕರ್ನಾಟಕದ ಬಸ್ಸುಗಳಿಗೆ ಮಸಿ ಬಳಿಯುವ ಮಟ್ಟಕ್ಕೆ ಇಳಿಯುವುದು ಸಂವಿಧಾನ ಬಾಹಿರ ಎಂದ ಅವರು, ಕೇಂದ್ರದಲ್ಲಿ ರಾಜ್ಯದಿಂದ 28 ಜನ ಬಿಜೆಪಿಯಿಂದ ಆಯ್ಕೆಯಾದ ಸಂಸದರು, ನಾಲ್ಕು ಜನ ಕೇಂದ್ರದ ಮಂತ್ರಿಗಳು, ಜೊತೆಗೆ ರಾಜ್ಯದ ಮುಖ್ಯಮಂತ್ರಿ ಎಲ್ಲಾರೂ ಬಿಜೆಪಿಗರಿದ್ದು ಕನ್ನಡ ನಾಡಿಗೆ ಆಗುತ್ತಿರುವ ಅನ್ಯಾಯವನ್ನ ಪ್ರಶ್ನೆ ಮಾಡದ ಸ್ಥಿತಿಯಲ್ಲಿ ಇದಾರೆ, ಇದು ಬಿಜೆಪಿಗರು ನಾಡಿಗೆ ಮಾಡಿದ ದ್ರೋಹವಾಗಿದೆ ಎಂದರು.
ಎಂಇಎಸ್ ಮತ್ತು ಶಿವಸೇನೆಯ ಪ್ರತಿಕೃತಿ ದಹನ ಮಾಡಿದ ಕಾರ್ಯಕರ್ತರು ಕೇಂದ್ರ, ರಾಜ್ಯ ಹಾಗೂ ಮಹಾರಾಷ್ಟ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ರಾಜ್ಯ ಮುಖಂಡ ಡಿ.ಪಿ.ಆಂಜನೇಯ, ಜಿಲ್ಲಾಧ್ಯಕ್ಷ ಮಂಜುನಾಥ್ ಜಿಲ್ಲಾ ಕಾರ್ಯದರ್ಶಿ ಹೆಚ್ ಮುನಿಪಾಪಯ್ಯ ಕಾರ್ಯಕಾರಿ ಸಮಿತಿಯ ಕೃಷ್ಣಪ್ಪ, ಎ.ಪೃಥ್ವಿರಾಜ್ ಗೌಡ ಮೆಹಬೂಬ್, ಜಿ .ಗಂಗಾಧರ್ ಬಾಲು, ಕುಮಾರ, ಕೇಶವ ಉಮೇಶ್ ತಾಲೂಕ ಅಧ್ಯಕ್ಷರಾದ ಡಿ .ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಉಪಾಧ್ಯಕ್ಷರಾದ ಮಂಜುನಾಥ ರಾಮಚಂದ್ರು, ಮಾಳವ ನಾರಾಯಣ, ಚಿದಾನಂದ, ಮನು, ಡಿಕೆ ಬಾಬಾ, ಸಿ.ಗಂಗಾಧರ್, ದಿವಾಕರ್, ವೆಂಕಟೇಶ್, ಮಾದೇವ ಮುಂತಾದವರು ಭಾಗವಹಿಸಿದ್ದರು