ಸೆ.6ರಂದು ದೊಡ್ಡಬಳ್ಳಾಪುರದ ಹಲವೆಡೆ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 220/66/11 ಕೆ.ವಿ. ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸೆ.6ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ KF02-ಬಿರ್ಲಾ ಸೂಪರ್, KF08-ಟೌನ್ ಹಾಗೂ KF22-ಕರೇನಹಳ್ಳಿ ಫೀಡರ್‌ಗಳಲ್ಲಿ ವಿದ್ಯುತ್ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಫೀಡರ್‌ಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ದೊಡ್ಡಮ್ಮ ದೇವಸ್ಥಾನ, ಶಾಂತಿನಗರ, ಇಸ್ಲಾಂಪುರ, ತ್ಯಾಗರಾಜನಗರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಕೊಂಗಾಡಿಯಪ್ಪ ಮುಖ್ಯರಸ್ತೆ, ಕನಕದಾಸರಸ್ತೆ, ಬಸವಣ್ಣ ದೇವಸ್ಥಾನದ ರಸ್ತೆ, ಕೆ.ಸಿ.ಪಿ‌ ಸರ್ಕಲ್, ಆಲಹಳ್ಳಿ, ನಾಗಸಂದ್ರ, ಕುಚ್ಚಪ್ಪನಪೇಟೆ, ಸಂಜಯನಗರ, ಭುವನೇಶ್ವರಿನಗರ, ಚೈತನ್ಯನಗರ, ವೀರಾಪುರ, ಗಾಂಧಿನಗರ, ಖಾಸ್ ಬಾಗ್, ರಂಗಪ್ಪ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು.

ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!