ಬೆಂಗಳೂರಿನಲ್ಲಿ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಜನರಿಗೆ ತಲುಪುತ್ತಿದ್ದ ಕರೆಂಟ್ ಬಿಲ್, ಕೆಲವೆಡೆ ಇನ್ನೂ ಕರೆಂಟ್ ಬಿಲ್ ಜನರಿಗೆ ತಲುಪಿಲ್ಲ. ಈ ಕುರಿತು ಬೆಸ್ಕಾಂಗೆ ಪ್ರಶ್ನೆ ಮಾಡಿದರೆ ತಾಂತ್ರಿಕ ಸಮಸ್ಯೆ ಆಗಿರೋದರಿಂದ ಸ್ವಲ್ಪ ತಡವಾಗುತ್ತಿದೆ ಎನ್ನುತ್ತಿರುವ ಬೆಸ್ಕಾಂ ಸಿಬ್ಬಂದಿ.
ತಾಂತ್ರಿಕ ಸಮಸ್ಯೆ ಬಗೆಹರಿದ ಕೂಡಲೇ ಎಲ್ಲಾ ಬಿಲ್ ಗಳು ಗ್ರಾಹಕರಿಗೆ ತಲುಪುತ್ತದೆ ಎಂದು ಹೇಳುತ್ತಿರುವ ಬೆಸ್ಕಾಂ
ಅಧಿಕಾರಿಗಳೊಂದಿಗೆ ಮಾತನಾಡಿ ಬಿಲ್ ಪಾವತಿ ದಿನವನ್ನು ಹೆಚ್ಚಳ ಮಾಡುತ್ತೇವೆ. ಕೆಲವರಿಗೆ ಬಿಲ್ ದರವು ಎರಡು ಪಟ್ಟು ಹೆಚ್ಚಾಗಿ ಬಂದಿದ್ದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಬಿಲ್ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹಾರ ಮಾಡಲು ಹೇಳಿದ್ದೇವೆ ಎಂದು ಬೆಸ್ಕಾಂನ ಕಸ್ಟಮರ್ ರಿಲೇಷನ್ ಮ್ಯಾನೇಜರ್ ನಾಗರಾಜ್ ಹೇಳಿದ್ದಾರೆ.
ಈಗಾಗಲೇ ಬಿಲ್ ಕಟ್ಟಿದವರು ಹೆಚ್ಚಿನ ಹಣ ಪಾವತಿಸಿದ್ದರೆ ಮುಂದಿನ ತಿಂಗಳ ಬಿಲ್‌ನಲ್ಲಿ ಕಡಿತಗೊಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.