
ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆಚರಿಸುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹುಟ್ಟುಹಬ್ಬದ ಭಾಗವಾಗಿ ಹಣ್ಣುಹಂಪಲು ವಿತರಿಸಿ ಮಾತನಾಡಿದ ಅವರು, ವಿಜೃಂಭಣೆಯ ಆಚರಣೆಯ ಬದಲಾಗಿ, ಬಡವರಿಗೆ, ರೋಗಿಗಳಿಗೆ ನೆರವಾಗುವಂತಹ ಸಾಮಾಜಿಕ ಚಟುವಟಿಕೆಗಳನ್ನು ಒಳಗೊಂಡ ಹುಟ್ಟುಹಬ್ಬದ ಆಚರಣೆಯೂ ಎಲ್ಲರಿಗೂ ಮಾದರಿ. ಇದೇ ರೀತಿ ಹುಟ್ಟುಹಬ್ಬದ ಅಂಗವಾಗಿ ಹಣ್ಣುಹಂಪಲನ್ನು ವಿತರಿಸುವ ಕೆಲಸ ಮಾಡಲಾಗಿದೆ. ಜನರ ಆರ್ಶೀವಾದದಿಂದ ಸಾಮಾಜಿಕ ಕಾರ್ಯಗಳು ಸಹಕಾರಗೊಳ್ಳುತ್ತಿದೆ ಎಂದರು.
ಕೆಎಚ್‌ಎಂಗೆ ಡಿಸಿಎಂ ಸ್ಥಾನ ನೀಡಿ
ಕೆ.ಎಚ್ ಮುನಿಯಪ್ಪ ಅವರು ದೇಶ ಕಂಡ ಧೀಮಂತ ನಾಯಕರಲ್ಲಿ ಒಬ್ಬರು. ಅವರು ಯಾವುದೋ ಒಂದು ಜಾತಿಗೆ ಸೀಮಿತವಲ್ಲ. ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಸಾಕಷ್ಟು ಅಭಿವೃದ್ದಿ ಕಾರ್ಯವಾಗಲಿದೆ. ಅನ್ನಭಾಗ್ಯ ಯೋಜನೆಯನ್ನು ಕೂಡ ಯಶಸ್ವಿಯಾಗಿ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ತಮ್ಮ ಕೆಲಸದ ಮೂಲಕ ಮಾತನಾಡುವವರು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅವರು ಪ್ರಭಾವ ಹೊಂದಿದ್ದಾರೆ. ಜನರ ನಾಡಿಮಿಡಿತವನ್ನು ಅರಿತುಕೊಂಡಿದ್ದಾರೆ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ್ ಕುಮಾರ್, ಕೆಪಿಸಿಸಿ ಸದಸ್ಯ ಎಸ್.ಆರ್ ಮುನಿರಾಜ್, ವಾಲ್ಮೀಕಿ ಸಂಘದ ತಾಲೂಕು ಉಪಾಧ್ಯಕ್ಷ ಕುಮಾರ್ ಸಿ, ಹೋಬಳಿ ಅಧ್ಯಕ್ಷ ಕೃಷ್ಣ, ಸಿನಿಮಾ ನಿರ್ಮಾಪಕ ಲಕ್ಷ್ಮಿಪತಿ, ಮುಖಂಡರಾದ ರಾಮೇಗೌಡ, ನರಸಿಂಹಯ್ಯ, ಕೆಂಪಣ್ಣ, ಟಿಎಪಿಎಂಸಿ ನಿರ್ದೇಶಕ ರಾಮಾಂಜಿನಪ್ಪ, ಮುನಿಕೃಷ್ಣಪ್ಪ, ಕೃಷ್ಣಮೂರ್ತಿ ಡಿ ಎಂ (ಕಿಟ್ಟಿ), ರಮೇಶ್ ಸೇರಿದಂತೆ ಅನೇಕರು ಹಾಜರಿದ್ದರು.