
ದೊಡ್ಡಬಳ್ಳಾಪುರ ತಾಲೂಕಿನ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು.
ಹುಂಡಿಯಲ್ಲಿ 79,72,502 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ…
ಹುಂಡಿಯಲ್ಲಿ 79,72,502 ನಗದು, 03 ಗ್ರಾಂ 900 ಮಿಲಿ ಚಿನ್ನ, 1 ಕೆಜಿ 200 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ದೇವಾಲಯದ ಕಾರ್ಯದರ್ಶಿ ಹಾಗೂ ಉಪ ಆಯುಕ್ತ ಪಿ. ದಿನೇಶ್, ದೇವಾಲಯದ ಉಪ ಕಾರ್ಯದರ್ಶಿ ಜಿ.ಜೆ .ಹೇಮಾವತಿ, ಪ್ರಧಾನ ಅರ್ಚಕರು, ಪ್ರಾಧಿಕಾರ ಸದಸ್ಯರಾದ ಜೆ.ಎನ್.ರಂಗಪ್ಪ, ಎಸ್, ರವಿ, ಲಕ್ಷ್ಮ ನಾಯಕ್, ಆರ್. ವಿ .ಮಹೇಶ್, ಕುಮಾರ್, ಹೇಮಲತಾ ರಮೇಶ್, ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.