
ಚಾಲಕನ ನಿಯಂತ್ರಣ ತಪ್ಪಿ ಹಸುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಬೊಲೆರೊ ವಾಹನ ಹೈವೆಯಿಂದ ಸರ್ವಿಸ್ ರಸ್ತೆಗೆ ಪಲ್ಟಿ ಹೊಡೆದಿರುವ ಘಟನೆ ದೊಡ್ಡಬಳ್ಳಾಪುರದ ಮಧುರನಹೊಸಹಳ್ಳಿ ಗೇಟ್ ಸಮೀಪ ಹಾದು ಹೋಗಿರುವ ದಾಬಸ್ ಪೇಟೆ-ಹೊಸಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಘಟನೆಯಲ್ಲಿ 1.5 ಲಕ್ಷ ಮೌಲ್ಯದ ಒಂದು ಹಸುವಿನ ಸ್ಥಿತಿ ಗಂಭೀರವಾಗಿದೆ. ಮತ್ತೊಂದು ಹಸು ಪ್ರಾಣಾಪಾಯದಿಂದ ಪಾರಾಗಿದೆ.
ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.