
ಶ್ರೀ ರಾಮಾಂಜನೇಯ ಸ್ವಾಮಿ ಸೇವಾ ಸಮಿತಿ ಅಭಿವೃದ್ಧಿ ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಗಂಗಸಂದ್ರ ಗ್ರಾಮದಲ್ಲಿ ಮೇ.6, 7ರಂದು ಶ್ರೀ ಅಶ್ವತ್ಥ ಕಟ್ಟೆ ನಾಗ ದೇವರ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ…
ಮೇ.5ರ ಮಂಗಳವಾರ ಸಂಜೆ 4ಗಂಟೆಗೆ ಮುತ್ತೈದೆಯರಿಂದ ಮತ್ತು ಹೆಣ್ಣು ಮಕ್ಕಳಿಂದ ಗಂಗೆ ಪೂಜೆ ಮತ್ತು ಗಣಪತಿ, ಮಹಾಮಂಗಳಾರತಿ ಏರ್ಪಡಿಸಲಾಗಿದೆ…
ಮೇ.6ರ ಬುಧವಾರದಂದು ಬೆಳಗ್ಗೆ 6 ಗಂಟೆಗೆ ಯಾಗಶಾಲೆ ಪ್ರವೇಶ, ಗೋಪೂಜೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ದೇವನಾಂದಿ ಪ್ರಾರ್ಥನೆ, ಕಳಶ ಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಸ್ವಾಮಿ ಹೋಮ, ಬ್ರಹ್ಮ ವಿಷ್ಣು ಮಹೇಶ್ವರ ಸ್ವಾಮಿ ಹೋಮ, ಗ್ರಾಮದೇವತೆ ಹೋಮ, ಮತ್ತು ಪೂರ್ಣಾಹುತಿ ಇರುತ್ತದೆ.
ಬೆಳಿಗ್ಗೆ 10 ಗಂಟೆಗೆ ಅಶ್ವತ್ಥನಾರಾಯಣಸ್ವಾಮಿ ವಿವಾಹ, ಮಧ್ಯಾಹ್ನ 12ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ 12-30ಕ್ಕೆ ತೀರ್ಥ ಪ್ರಸಾದ ವಿನಿಯೋಗ ಇರಲಿದೆ.
ಸಂಜೆ : 5-00 ಗಂಟೆಗೆ ಮಹಾ ಸುದರ್ಶನ ಸ್ವಾಮಿ ಆರಾಧನೆ, ಮತ್ತು ಸುದರ್ಶನ ಹೋಮ, ಸುಬ್ರಹ್ಮಣ್ಯಸ್ವಾಮಿ ಆರಾಧನೆ ಮತ್ತು ನಾಗದೇವರ ವಿಗ್ರಹಗಳಿಗೆ ಅಧಿವಾಸಗಳು, ಧಾನ್ಯಾಧಿವಾಸ, ಶಯ್ಯಾಧಿವಾಸ, ಅಷ್ಠಾವಧಾನ ಸೇವೆ ಮತ್ತು ವಾಸ್ತು ಹೋಮ, ರಾಕ್ಷೆಘ್ನ ಹೋಮ ಮತ್ತು ಮಹಾಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿರುತ್ತದೆ…
ಮೇ.7ರಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ದೇವರ ದರ್ಶನ, ಸುಬ್ರಹ್ಮಣೇಶ್ವರ ಸ್ವಾಮಿ ಹೋಮ, ಸರ್ಪಶಾಂತಿ ಹೋಮ, ದೇವರ ಕಳಾಹೋಮ, ಅಷ್ಟ ದಿಕ್ಷಾಲಕರ ಬಲಿ ಸೇವೆ, ದೇವರಿಗೆ ಫಲಪಂಚಾಮೃತ ಅಭಿಷೇಕ, ದೇವರ ಅಲಂಕಾರ 11-00 ಗಂಟೆಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರಲಿದೆ..
ಮೇ.7ರ ಬೆಳಗ್ಗೆ 10ಗಂಟೆಗೆ ಶ್ರೀ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಶ್ರೀ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿ, ಪುಷ್ಪಾಂಡಜ ಮಹರ್ಷಿ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದ ಗಿರಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.
ಆಹಾರ ಸಚಿವ ಕೆ.ಎಚ್ ಮುನಿಯಪ್ಪನವರಿಂದ ಉದ್ಘಾಟನೆ ಮಾಡಲಿದ್ದಾರೆ..
ಟ್ರಸ್ಟ್ ನ ಜಿ.ಬಿ ಪಟಾಲಪ್ಪ, ಜಿ.ಎಂ ಚನ್ನಪ್ಪ, ಜಿ.ಕೆ ಶ್ರೀಧರ್ ಸೇರಿದಂತೆ ಇತರರು ಕಾರ್ಯಕ್ರಮವನ್ನು ನೆರವೇರಿಸಿಕೊಡಲಿದ್ದಾರೆ..