SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಮೂವರು‌ ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಇಂದು ಮಧ್ಯಾಹ್ನ 12ಕ್ಕೆ 2026 SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ ಮಾಡಲಾಗಿದೆ.

7 ಲಕ್ಷದ 24 ಸಾವಿರದ 794 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 7.70.209 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು..

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ

ಉಡುಪಿ ದ್ವಿತೀಯ ಸ್ಥಾನ

ಉತ್ತರ ಕನ್ನಡ ತೃತೀಯ ಸ್ಥಾನ

ಕಲಬುರಗಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ..

ಶೇ. 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಹಾಗೂ KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗುವುದು.

ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (Digilocker) ಮೂಲಕ ಏ.:23ರಂದು ಮಧ್ಯಾಹ್ನ 12ಕ್ಕೆ ಲಭ್ಯಗೊಳಿಸಲಾಗುವುದು. https://www.digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಂಕಪಟ್ಟಿಯನ್ನು ಡಿಜಿಲಾಕರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳವ ಪ್ರಕ್ರಿಯೆಯನ್ನು ಈ Video link https://tinyurl.com/mw84wmh9 ನ್ನು ಬಳಸಿ ತಿಳಿದುಕೊಳ್ಳಬಹುದು. ಫಲಿತಾಂಶ ಪಟ್ಟಿಯನ್ನು ಸಂಬಂಧಿತ ಶಾಲೆಗಳಿಗೆ ದಿನಾಂಕ: 23-04-2026 ರಂದು ಮಧ್ಯಾಹ್ನ 12.00 ಗಂಟೆಗೆ ಲಭ್ಯಗೊಳಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ…

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯುತ್ತಮ ಸಾಧನೆ ತೋರಿದ್ದು, ಕಲಬುರಗಿ ಜಿಲ್ಲೆ ಕಡಿಮೆ ಪಾಸ್ ಪ್ರಮಾಣ ದಾಖಲಿಸಿದೆ. ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಗಳು ರಾಜ್ಯ ಸರಾಸರಿಗಿಂತ ಉತ್ತಮ ಸಾಧನೆ ತೋರಿವೆ.

ಟಾಪರ್‌ಗಳ ಹೆಸರುಗಳು ಮತ್ತು ಸಾಧನೆ

ರೂಪಾ ಚನಗೌಡ ಪಾಟೀಲ (ಬೆಳಗಾವಿ) – 625/625

ಜಾನವಿ (ಹಾಸನ) – 625/625

ಉತ್ಸವ ಪಾಟೀಲ (ಹಾಸನ) 625/625

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 90% ಕ್ಕಿಂತ ಹೆಚ್ಚು ಪಾಸ್ ಪ್ರಮಾಣ ಸಾಧಿಸಿದ್ದು, ಉಡುಪಿ 88%, ಬೆಂಗಳೂರು ನಗರ 82%, ಮೈಸೂರು 80%, ಬೆಳಗಾವಿ 78%, ಶಿವಮೊಗ್ಗ 76%, ತುಮಕೂರು 74%, ಕೋಲಾರ 72%, ಚಿತ್ರದುರ್ಗ 70% ಹಾಗೂ ಕಲಬುರಗಿ 65% ಪಾಸ್ ಪ್ರಮಾಣ ದಾಖಲಿಸಿದೆ.

ರಾಜ್ಯ ಮಟ್ಟದ ಟಾಪರ್‌ಗಳ ಪಟ್ಟಿಯಲ್ಲಿ ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ) ಹಾಗೂ ಉತ್ಸವ ಪಾಟೀಲ (ಹಾಸನ) ಪೂರ್ಣ 625/625 ಅಂಕಗಳನ್ನು ಪಡೆದು ಸ್ಥಾನ ಪಡೆದಿದ್ದಾರೆ. ಇತರ ಜಿಲ್ಲೆಗಳಲ್ಲಿಯೂ ಹಲವಾರು ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಪಡೆದು ರಾಜ್ಯ ಮಟ್ಟದ ಟಾಪರ್‌ಗಳ ಪಟ್ಟಿಯಲ್ಲಿ ಸೇರಿದ್ದಾರೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳು ಮೇ 2026ರಲ್ಲಿ ನಡೆಯಲಿದ್ದು, ಶಾಲೆಗಳ ಮೂಲಕ ಮೂಲ ಮಾರ್ಕ್‌ಶೀಟ್ ವಿತರಿಸಲಾಗುತ್ತದೆ. DigiLocker ಮೂಲಕ ಡಿಜಿಟಲ್ ಮಾರ್ಕ್‌ಶೀಟ್ ಕೂಡ ಲಭ್ಯವಿದೆ.

Leave a Reply

Your email address will not be published. Required fields are marked *

error: Content is protected !!