ಸರ, ದೇವಸ್ಥಾನ ಹುಂಡಿ, ಇಂಟರ್ನೆಟ್ ಕೇಬಲ್, ಹಸು, ಕುರಿ, ಮೇಕೆ ಕಳ್ಳತನ ಆಯ್ತು ಈಗ ಬೈಕ್ ರಾಬರಿಗಿಳಿದ ಖದೀಮರು: ಹಾಡಹಗಲೇ ಬೆಲೆ ಬಾಳುವ ಬೈಕ್‌ ಗಳ ಕಳ್ಳತನ

ತಾಲೂಕಿನಲ್ಲಿ ಪದೇ ಪದೇ ಮರುಕಳಿಸುತ್ತಿರುವ ಕಳ್ಳತನ ಪ್ರಕರಣಗಳು. ಒಂಟಿ ಮಹಿಳೆಯರ ಸರಗಳ್ಳತನ, ದೇವಸ್ಥಾನ‌ ಹುಂಡಿಗಳ ಕಳವು, ಕುರಿ, ಮೇಕೆ, ಹಸು ಕಳ್ಳತನ, ಇಂಟರ್ನೆಟ್ ಕೇಬಲ್‌ ಹೀಗೆ ಬೆಲೆ ಬಾಳುವ ವಸ್ತು, ಪ್ರಾಣಿಗಳನ್ನು ಕಳ್ಳತನ ಮಾಡುತ್ತಿರೋ ಖದೀಮರು.

ಮೇ.20ರಂದು ಮಟ ಮಟ ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ತಾಲೂಕು ಕಚೇರಿ ಎದುರು ಪಾರ್ಕ್ ಮಾಡಿದ್ದ ಸುಮಾರು 40 ಸಾವಿರ ಬೆಲೆ ಬಾಳುವ ಮೋಟಾರ್ ಸೈಕಲ್ ನ್ನು ಎಸ್ಕೇಪ್ ಮಾಡಿರೋ ಕಳ್ಳರು. ತಾಲೂಕು ಕಚೇರಿಯಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುವ ವ್ಯಕ್ತಿಯು ಎಂದಿನಂತೆ ತನ್ನ ಬೈಕ್‌ ನಿಲ್ಲಿಸಿ ಕೆಲಸಕ್ಕೆ ಕಚೇರಿ ಒಳಗೆ ಹೋಗಿದ್ದಾರೆ. ಬೈಕ್ ನಿಲ್ಲಿಸಿ ಕೆಲ ಹೊತ್ತಾದ ಮೇಲೆ ಬಂದು ನೋಡಿದಾಗ ಬೈಕ್ ನಾಪತ್ತೆ, ಎಷ್ಟು ಹುಡುಕಿದರೂ ಬೈಕ್ ಸಿಗದ ಕಾರಣ ಜೂನ್.2ರಂದು ದೊಡ್ಡಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮೇಲೆ ತಿಳಿಸಿದ ಘಟನೆ ಮಾಸುವ ಮೊದಲೇ ಇನ್ನೊಂದು ಬೈಕ್ ನಾಪತ್ತೆ. ಈ ಘಟನೆಯೂ ಸಹ ಮೇ.29ರ ಮಧ್ಯಾಹ್ನ 2:40ರ ಸಮಯದಲ್ಲಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಲು ನಗರದ ಬಸ್ ನಿಲ್ದಾಣ ಬಳಿಯ ಬೇಕರಿಯೊಂದರ ಖಾಲಿ ಜಾಗದಲ್ಲಿ ಬೈಕ್ ನಿಲ್ಲಿಸಿ ಬಸ್ ಹತ್ತಿ ಹೋದ ಬೈಕ್ ಮಾಲೀಕ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಬೈಕ್ ಮಾಲೀಕ ಬರುವಷ್ಟರಲ್ಲಿ ಸ್ಥಳದಿಂದ ಬೈಕ್ ಎಗರಿಸಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿದೆ.

ಹೀಗೆ ನಗರ ಹಾಗೂ ಗ್ರಾಮೀಣದಲ್ಲಿ ಕಳ್ಳರ ಕೈಚಳಕದ ಬಿಸಿ ವಸ್ತುಗಳನ್ನು ಕಳೆದುಕೊಂಡವರಿಗೆ ತಟ್ಟುತ್ತಿದೆ. ಸಾರ್ವಜನಿಕರ ನಿದ್ದೆಗೆಡಿಸುತ್ತಿರುವ ಪದೇ ಪದೇ ಮರುಕಳಿಸುತ್ತಿರುವ ಕಳ್ಳತನ ಪ್ರಕರಣಗಳು. ಜನ ಸಮಾನ್ಯರು ನೆಮ್ಮದಿ ಜೀವನ ನಡೆಸಲು ಕಳ್ಳರ ಅಟ್ಟಹಾಸವನ್ನು ಪೋಲಿಸ್ ಇಲಾಖೆ ತಡೆಯಬೇಕು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಆಗ ಕಳ್ಳರ ಸದ್ದು ಅಡಗಿಸಬಹುದು.

Leave a Reply

Your email address will not be published. Required fields are marked *