
ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆಯಾಗಿದೆ.
ಕ್ಯಾಂಟೀನ್ ನೌಕರ 100ಕ್ಕೂ ಹೆಚ್ಚು ಐಪಿಎಲ್ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡುವಾಗ ಸಿಸಿಬಿ (CCB) ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಚಂದ್ರಶೇಖರ್ ಬಂಧಿತ ಆರೋಪಿಯಾಗಿದ್ದು, ಈತನ ಶ್ರೀ ಲಕ್ಷ್ಮಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ..
ಈತ ಒಂದೊಂದು ಟಿಕೆಟ್ ನ್ನು ಸುಮಾ ರೂ. 15 ಸಾವಿರ ದಿಂದ ₹19 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ..
ಮಾರ್ಚ್ 28 ರಂದು ನಡೆದ ಆರ್‌ಸಿಬಿ (RCB) ಮತ್ತು ಕೆಕೆಆರ್ (KKR) ಪಂದ್ಯ.. ಆರ್ಸಿಬಿ(RCB), ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯಗಳ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾನೆ.
ಕೆಎಸ್‌ಸಿಎ ಸದಸ್ಯ ಗಣೇಶ್ ಪರೀಕ್ಷಿತ್ ಎಂಬುವವರು ಈ ಟಿಕೆಟ್‌ಗಳನ್ನು ನೀಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆರೋಪಿ ಬಾಯಿಬಿಟ್ಟಿದ್ದಾನೆ..
ಸದ್ಯ ಗಣೇಶ್ ಪರೀಕ್ಷಿತ್ ತಲೆಮರೆ ಸಿಕೊಂಡಿದ್ದು, ಪೊಲೀಸರಿಂದ ಹುಡುಕಾಟ ನಡೆಸುತ್ತಿದ್ದಾರೆ.
ಟಿಕೆಟ್ ಮಾರಾಟಕ್ಕೆ ಸಹಕರಿಸಿದ ಆರೋಪದ ಮೇಲೆ. ಕೆಲವು ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಸಿಸಿಬಿ ಎಫ್‌ಐಆರ್ ದಾಖಲಿಸಿದೆ..
ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ..