ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ: ದಾಳಿ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ

ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ  14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.

6 ಕೆಜಿ ಚಿನ್ನ, 5ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ ಗಳು ಜಪ್ತಿ ಮಾಡಲಾಗಿದೆ.

ಎರಡು ದಿನಗಳ ಲೋಕಾಯುಕ್ತ ದಾಳಿ ಮುಕ್ತಾಯ ಬೆನ್ನೆಲ್ಲೇ ಕೋಟಿ ಕೋಟಿ ಅಕ್ರಮ ಆಸ್ತಿ ಬೆಳಕಿಗೆ ಬಂದಿದೆ.

ಬೆಳಗಾವಿಯ ಬೆಳಗಾವಿ ನಗರದ ಆಂಜನೇಯ ನಗರ ಸೇರಿದಂತೆ ಏಳು ಕಡೆ ಏಕಕಾಲದಲ್ಲಿ ನಡೆದ ದಾಳಿಯಲ್ಲಿ ಒಟ್ಟು 14 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ.

DUDC ಎಇಇ ಅಜಯಸಿಂಗ್ ರಜಪೂತ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬೆಳಗಾವಿಯಲ್ಲಿ ಮೂರು ಮನೆ, ಕಚೇರಿ, ಬ್ಯಾಂಕ್ ಲಾಕರ್ ಪರಿಶೀಲನೆ ನಡೆಸಲಾಗಿದೆ.

ಈ ವೇಳೆ ಸವದತ್ತಿ, ಹುಕ್ಕೇರಿ, ಹುಬ್ಬಳ್ಳಿಯಲ್ಲಿ 18 ನಿವೇಶನ ಪತ್ತೆಯಾಗಿದೆ. 6 ಕೆಜಿ ಚಿನ್ನ, 5ಕೆಜಿ ಬೆಳ್ಳಿ, 3.12ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ ಗಳು ಜಪ್ತಿ ಮಾಡಲಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಿನ್ನೆಲೆ ತನಿಖೆ ಮುಂದುವರಿದಿದೆ..

Leave a Reply

Your email address will not be published. Required fields are marked *

error: Content is protected !!