
ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಕಿಶೋರ್ ಹಾಗೂ ಗಿರೀಶ್ ಮೃತ ದುರ್ದೈವಿಗಳು.
ಎರಡು ಕಾರುಗಳಲ್ಲಿ 8 ಜನ ಸ್ನೇಹಿತರೊಂದಿಗೆ ರಾಮಸಮುದ್ರ ಕೆರೆಗೆ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ.

ಜಾತ್ರೆ ಪ್ರಯುಕ್ತ ಗಡಮಿಂಚೇನಹಳ್ಳಿ ಗ್ರಾಮದ ಸ್ನೇಹಿತನ ಮನೆಗೆ 8 ಜನ ಆಗಮಿಸಿದ್ದರು.
ಬಿರು ಬೇಸಿಗೆ ತಾಳಲಾರದೆ ರಾಮಸಮುದ್ರ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಕಿಶೋರ್ ಹಾಗೂ ಗಿರೀಶ್ ಇಬ್ಬರು ಸ್ನೇಹಿತರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರಿಬ್ಬರೂ ಕ್ಯಾಬ್ ಚಾಲಕರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೆರೇಸಂದ್ರ ಹಾಗೂ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.