ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 12ನೇ ಘಟಿಕೋತ್ಸವ, 1281 ವಿದ್ಯಾರ್ಥಿಗಳಿಗೆ ಪದವಿ ವಿತರಣೆ

ಯಲಹಂಕ: ನಿಟ್ಟೆ ಮೀನಾಕ್ಷಿ ತಾಂತ್ರಿಕ  ಮಹಾವಿದ್ಯಾಲಯದಲ್ಲಿ ನಡೆದ  12 ನೇ ಘಟಿಕೋತ್ಸವ  ಕಾರ್ಯಕ್ರಮದಲ್ಲಿ  1281 ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಹಾಗೂ ಮಾಸ್ಟರ್ಸ್  ಪದವಿ ಪಡೆದರು.

ನಿಟ್ಟೆ ಮೀನಾಕ್ಷಿ  ತಾಂತ್ರಿಕ  ಮಹಾವಿದ್ಯಾಲಯದ ಅವರಣದಲ್ಲಿ 12 ನೇ ಘಟಿಕೋತ್ಸವ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು, ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯದ ಕುಲಪತಿಗಳಾದ ಡಾ॥ವಿದ್ಯಾಶಂಕರ್ ಎಸ್, ಕರ್ನಾಟಕ  ಕೇಂದ್ರೀಯ  ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ  ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ ಎನ್,ಆರ್, ಶೆಟ್ಟಿ ಮತ್ತು ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಭಾಗವಹಿಸಿದರು.

ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕದೊಂದಿಗೆ ಪದವಿ ವಿತರಣೆ ಮಾಡಲಾಯಿತು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಚಂದ್ರಶೇಖರ್  ಎಲ್ ಪ್ರತಿಷ್ಠಿತ  ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ  ಚಿನ್ನದ ಪದಕ ಪಡೆದರು, ಅತ್ಯುತ್ತಮ  ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ  ಹೆಗ್ಡೆ ಸ್ಮರಣಾರ್ಥ  ಚಿನ್ನದ ಪದಕ ಮೆಕ್ಯಾನಿಕ್ ಇಂಜಿನಿಯರಿಂಗ್ ವಿಭಾಗದ ಅಲಿನಿ ಕ್ರೈಸ್ಟ್ ಪೌಲ್ ಪಡೆದರು, ಅತ್ಯುತ್ತಮ ವಿದ್ಯಾರ್ಥಿಗೆ ಸಲ್ಲುವ ಜಸ್ಟಿಸ್ ಕೆ.ಎಸ್. ಹೆಗ್ಡೆ  ಸ್ಮರಣಾರ್ಥ  ಚಿನ್ನದ ಪದಕವನ್ನ ಕಂಪ್ಯೂಟರ್  ಸೈನ್ಸ್ ವಿಭಾಗದ ಕರಣ್ ಆರ್ ಪಡೆದರು.

Leave a Reply

Your email address will not be published. Required fields are marked *