ನಗರದ ತಾಯಿ-ಮಗು ಆಸ್ಪತ್ರೆಯಲ್ಲಿ ದಿನನಿತ್ಯ ಸಾವಿರಾರು ಮಂದಿ ಬಂದು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆಸ್ಪತ್ರೆಯಲ್ಲಿ ಪಾಳಿಯಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್ ಗಳು ಸೇರಿದಂತೆ ಇರತೆ ಸಿಬ್ಬಂದಿ ಇರುತ್ತಾರೆ. ಆದರೆ ಇಲ್ಲಿ ಒಬ್ಬ ಕಾವಲುಗಾರ ಇಲ್ಲ. ಅಭದ್ರತೆಯಲ್ಲಿ ಪಾಳಿಯ ಕೆಲಸ ಮಾಡೋ ಮಹಿಳಾ ವೈದ್ಯರು, ನರ್ಸ್ ಸಿಬ್ಬಂದಿ. ಇವರು ಸೂಕ್ತ ಭದ್ರತೆಯಲ್ಲಿ ನಿರ್ಭೀತಿಯಿಂದ ಕೆಲಸ ಮಾಡಲು ಕಾವಲುಗಾರ ಅಥವಾ ಗನ್ ಮೆನ್ ಆಸ್ಪತ್ರೆಗೆ ಅತ್ಯವಶ್ಯಕ ಎಂದು ಸಮಾಜ ಸೇವಕಿ ನಾಗರತ್ನಮ್ಮ ಆಗ್ರಹಿಸಿದರು.
ಇನ್ನೂ ಈ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಇಲ್ಲ, ಬ್ಲಡ್ ಗಾಗಿ ಚಿಕ್ಕಬಳ್ಳಾಪುರ, ಯಲಹಂಕ ಹೀಗೆ ದೂರದ ಬ್ಲಡ್ ಬ್ಯಾಂಕ್ ಇರೋ ಕಡೆ ಹೋಗಿ ತೆಗೆದುಕೊಂಡು ಬರುವಷ್ಟರಲ್ಲಿ ಇಲ್ಲಿ ರೋಗಿ ಪ್ರಾಣ ಹೋಗಿರುತ್ತೆ. ಆದ್ದರಿಂದ ಆಸ್ಪತ್ರೆಗೆ ಬ್ಲಡ್ ಬ್ಯಾಂಕ್ ನ ಅಗತ್ಯತೆ ಇದೆ.
ಚಿಕಿತ್ಸೆ ಫಲಿಸದೇ ಆನೇಕ ರೋಗಿಗಳು ಸಾವನ್ನಪ್ಪಿದ ತಕ್ಷಣ ಶವಗಳನ್ನು ಶವಗಾರದಲ್ಲಿ ಇಡಲು ಇಲ್ಲಿ ಶವಗಾರ ವ್ಯವಸ್ಥೆ ಇಲ್ಲ. ಇನ್ನೂ ಮೂಲಭೂತ ಸೌಕರ್ಯಗಳ ಅವಶ್ಯಕತೆ ಈ ಆಸ್ಪತ್ರೆಗೆ ಇದೆ. ದಯಮಾಡಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಆಸ್ಪತ್ರೆಗೆ ಬೇಕಾಗುವ ಅಗತ್ಯತೆಗಳನ್ನು ಪೂರೈಸಬೇಕು ಎಂದು ಮನವಿ ಮಾಡಿದರು.