ವಿ. ಶಾಂತಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಯುವ ಮುಖಂಡರು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ವಿ.ಶಾಂತಕುಮಾರ್ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇಗುಲಕ್ಕೆ ಭೇಟಿಕೊಟ್ಟು ದೇವರಿಗೆ ಪೂಜೆ ಪುನಸ್ಕಾರ ನೆರೆವೇರಿಸಿದ್ದಾರೆ.

ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸನ್ಮಾನಿಸಿ ಪ್ರೀತಿಯಿಂದ ತಮ್ಮ ನಾಯಕನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

ಅಭಿಮಾನಿಗಳು ದೇವನಹಳ್ಳಿ ಸರ್ಕಾರಿ‌ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ವಿ.ಶಾಂತಕುಮಾರ್ ಆಸ್ಪತ್ರೆಗೆ ಧಾವಿಸಿ ನವಜಾತು ಶಿಶುಗಳಿಗೆ ಜನ್ಮ ನೀಡಿದ ತಾಯಂದಿರಿಗೆ ಮತ್ತು ಇತರೆ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ತಿಳಿಸಿದ್ರು.

ನಂತರ ಮಾತನಾಡಿದ ವಿ.ಶಾಂತಕುಮಾರ್, ನಮ್ಮ ಎಲ್ಲಾ ಮುಖಂಡರು, ಅಭಿಮಾನಿಗಳು, ಪಕ್ಷ ಕಾರ್ಯಕರ್ತರು ಸೇರಿ ಇವತ್ತು ಆಸ್ಪತ್ರೆಗೆ ಬಂದು ಬಡ ರೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ ಹಣ್ಣಹಂಪಲು ವಿತರಿಸಿರೋದು ತುಂಬಾ ಖುಷಿ ತಂದಿದೆ. ಸಚಿವ ಕೆ.ಎಚ್.ಮುನಿಯಪ್ಪ ಅವ್ರು ಹುಟ್ಟುಹಬ್ಬಕ್ಕೆ ಶುಭಕೋರಿದ್ದು ಮರೆಯಾಗದ ಕ್ಷಣವಾಗಿದೆ, ಎಲ್ಲಾ ಸಮಾಜದ ಕಾರ್ಯಕ್ರಮಗಳಿಗೆ ನನ್ನ ಬೆಂಬಲವಿದೆ, ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಪರವಾಗಿ ಕೆಲಸ ಮಾಡುವ ಹಂಬಲವಿದೆ, ನನ್ನ ಸಮಾಜಸೇವೆ ಮತ್ತಷ್ಟು ಮುಂದುವರೆಸಿಕೊಂಡು ಹೋಗ್ತೀನಿ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಯಪ್ಪ ಅಧ್ಯಕ್ಷರಾದಾಗಿನಿಂದ ಅಭಿವೃದ್ಧಿ ಕಾರ್ಯಗಳಿಗೆ ಒತ್ತುಕೊಟ್ಟು ಕೆರೆ ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ, ಇದು ಮುಂದಿನ ದಿನಗಳಲ್ಲಿಯೂ ಮುಂದುವರೆಯುತ್ತೆ ಎಂದರು.

ನಂತರ ಮಾತನಾಡಿದ ಅಭಿಮಾನಿ ಮೋಹನ್ ಬಾಬು, ವಿ.ಶಾಂತಕುಮಾರ್ ಅವರು ಒಳ್ಳೆಯದನ್ನೇ ಭಯಸುತ್ತಾರೆ, ಒಳ್ಳೇದನ್ನೇ ಮಾಡುತ್ತಿದ್ದಾರೆ, ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ, ಅವರ ಶ್ರಮಕ್ಕೆ ಒಳ್ಳೆ ಸ್ಥಾನಮಾನ ಈಗ ಸಿಕ್ಕಿದೆ, ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನ ಸಿಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹುಟ್ಟುಹಬ್ಬದಕ್ಕೆ ಶುಭಕೋರಿದ್ರು‌. ಇನ್ನು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅರದೇಶನಹಳ್ಳಿ ಮನೋಜ್ (ಮನು), ಬೆಟ್ಟೇನಹಳ್ಳಿ ನವೀನ್, ನಾಗೇಶ್ ಮತ್ತು ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!