ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ ನೀಡಲಾಯಿತು.

ರಾಯಲ್‌ ಓಕ್‌ ಇನ್‌ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ವಿಜಯ್ ಸುಬ್ರಮಣಿಯಂ, ವ್ಯವಸ್ಥಾಪಕ ನಿರ್ದೇಶಕ ಮಥನ್ ಸುಬ್ರಮಣಿಯಂ ಮತ್ತು ಫ್ರಾಂಚೈಸಿ ಪಾಲುದಾರ ಶ್ರೀ ದೀಪಕ್ ಶಿವಕುಮಾರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ನೂತನ ಮಳಿಗೆಗೆ ಚಾಲನೆ ನೀಡಲಾಯಿತು.

12000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಮಳಿಗೆಯು ಸ್ಥಳೀಯ ಗ್ರಾಹಕರಿಗೆ ವಾಸದ ಕೋಣೆಗಳು, ಮಲಗುವ ಕೋಣೆಗಳಿಂದ ಹಿಡಿದು ಗೃಹಾಲಂಕಾರಕ್ಕೆ ಅಗತ್ಯವಾದ ಅಂತಾರಾಷ್ಟ್ರೀಯ ಗುಣಮಟ್ಟದ ವ್ಯಾಪಕ ಶ್ರೇಣಿಯ ಪೀಠೋಪಕರಣಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸಲಿದೆ.

“ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪುವ ಸಂಸ್ಥೆಯ ಧ್ಯೇಯದ ಪ್ರತೀಕವಾಗಿ ಈ ಮಳಿಗೆ ಸಿದ್ಧಗೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ನಮ್ಮ ರೀಟೇಲ್‌ ಅಸ್ತಿತ್ವವನ್ನು ಇನ್ನಷ್ಟು ಬಲವರ್ಧನೆಗೊಳಿಸಿದ್ದೇವೆ. ಈ ಹೆಜ್ಜೆ ಸ್ಥಳೀಯ ಗ್ರಾಹಕರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಪೀಠೋಪಕರಣಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಜತೆಗೆ, ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನೀಡಲಿದೆ” ಎಂದು ವಿಜಯ್ ಸುಬ್ರಮಣಿಯಂ ಹೇಳಿದರು.

ಮಳಿಗೆ ವಿಳಾಸ: ಎಸ್‌ಎಲ್‌ವಿ ಕಾಂಪ್ಲೆಕ್ಸ್, ಕೊಡಿಗೆಹಳ್ಳಿ ಪಂಚಾಯತ್, ಆರ್‌ಎಂಸಿ ಮಾರುಕಟ್ಟೆ ಹತ್ತಿರ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂರವಾಣಿ: 76250 34585

Leave a Reply

Your email address will not be published. Required fields are marked *

error: Content is protected !!