ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವತಿ

ಯುವತಿಯೋರ್ವಳು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಸೋಂಪುರ ಹೋಬಳಿಯ ಕೆ.ಜಿ.ಶ್ರೀನಿವಾಸಪುರ ಗ್ರಾಮದಲ್ಲಿ ನಡೆದಿದೆ…

ಯಶಸ್ವಿನಿ (22) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ…

ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ದಾಬಸ್ ಪೇಟೆಯಲ್ಲಿನ ಪೆಟ್ರೋಲ್ ಬಂಕ್ ಗೆ ಹೋಗಿ ಅರ್ಧ ಲೀಟರ್ ಪೆಟ್ರೋಲ್ ತಂದು ಮನೆಯ ಹೊರಗೆ ಇದ್ದ ಬಚ್ಚಲು ಮನೆಯಲ್ಲಿ ಪೆಟ್ರೋಲ್ ಸುರಿದಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ…

ದೊಡ್ಡಬಳ್ಳಾಪುರ ಹೊರವಲಯದಲ್ಲಿರುವ ಫಾಕ್ಸ್ ಕಾನ್(ಆಪಲ್) ಕಂಪನಿಗೆ ಕಳೆದ ಐದು ತಿಂಗಳಿಂದ ಕೆಲಸಕ್ಕೆ ಹೋಗುತ್ತಿದ್ದಳು ಎಂಬ ಮಾಹಿತಿ ಒದಗಿಬಂದಿದೆ…

Leave a Reply

Your email address will not be published. Required fields are marked *

error: Content is protected !!