
ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಗಸ್ತಿನಲ್ಲಿದ್ದ ಇಬ್ಬರು 112 ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಡಾಯಿಸಿ ರಕ್ಷಣೆ ಮಾಡಿರುವಂತಹ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ಗ್ರಾಮಂತರ ಸಿಬ್ಬಂದಿ ಕುಮಾರ್ ಸನದಿ ಮತ್ತು ಸಶಸ್ತ್ರ ಪಡೆ ಸಿಬ್ಬಂದಿ ಬಸವರಾಜ ಅವರ ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಿದೆ…
ಸ್ಥಳೀಯರಿಂದ ವಿಚಾರ ತಿಳಿದ ಕೆಲವೇ ನಿಮಿಷದಲ್ಲಿ ಸ್ಪಂದಿಸಿದ 112 ಪೊಲೀಸರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ವ್ಯಕ್ತಿಯ ಜೀವ ರಕ್ಷಣೆ ಮಾಡಿದ್ದಾರೆ. ಸದ್ಯ ಪೊಲೀಸರ ಈ ಕಾರ್ಯ ವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸದ್ಯ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿರುವುದಿಲ್ಲ… ಅದೇರೀತಿ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣನೂ ತಿಳಿದುಬಂದಿರುವುದಿಲ್ಲ..
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ….