
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ 2026-27ನೇ ಸಾಲಿನ ಬಜೆಟ್ ಕುರಿತ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಮಾ.23ರಂದು ಹಮ್ಮಿಕೊಳ್ಳಲಾಗಿದೆ.
ಪಟ್ಟಣ ಪಂಚಾಯತಿಯ ಕಾರ್ಯಾಲಯದ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಅಧ್ಯಕ್ಷ ಪ್ರೇಮ್ ಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಪಾಧ್ಯಕ್ಷೆ ಶ್ವೇತಾ ಮುರಳೀಧರ ಉಪಸ್ಥಿತಿ ಇರಲಿದ್ದಾರೆ. ಸಭೆಗೆ ಪಟ್ಟಣ ಪಂಚಾಯತಿಯ ಕನ್ನಡ ಪರ, ರೈತಪರ, ದಲಿತಪರ ಸೇರಿದಂತೆ ಸಂಘಸಂಸ್ಥೆಗಳು, ಎನ್.ಜಿ.ಒ, ಮಾಧ್ಯಮಮಿತ್ರರು ಸಭೆಗೆ ಹಾಜರಾಗಿ ಸಲಹೆಗಳನ್ನು ನೀಡುವಂತೆ ಪಂಚಾಯತಿಯ ಮುಖ್ಯಾಧಿಕಾರಿ ಪಿ.ನರಸಿಂಹಮೂರ್ತಿ ತಿಳಿಸಿದ್ದಾರೆ.