ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು, ರೈತರ ಬೆಳೆಗಳು ನೆಲಕಚ್ಚಿವೆ. ಇದರಿಂದ ಸಾಕಷ್ಟು ನಷ್ಟವೂ ಉಂಟಾಗಿದೆ.

ಅದೇರೀತಿ ತಾಲೂಕಿನ ಅರಳುಮಲ್ಲಿಗೆಯಿಂದ  ಕುಂಟನಹಳ್ಳಿ, ಹುಸ್ಕೂರು ಸಂಪರ್ಕಿಸುವ ರಸ್ತೆಯಲ್ಲಿ ಬೃಹತ್ ಮರವು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದಿದೆ…ಇದರಿಂದ ಕುಂಟನಹಳ್ಳಿ, ಹುಸ್ಕೂರು ಗ್ರಾಮಗಳಿಗೆ ಹೋಗಲು, ಬರಲು ಆಗುತ್ತಿಲ್ಲ. ಮರ ಬಿದ್ದು ಹಲವು ಗಂಟೆಗಳು ಕಳೆದರೂ ಇದೂವರೆಗೆ ತೆರವುಗೊಳಿಸಿಲ್ಲ. ಈ ಹಿನ್ನೆಲೆ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ….

ನೀರಿನ ಅವ್ಯವಸ್ಥೆ, ವಿದ್ಯುತ್ ಅಭಾವದಿಂದ ಇಂದಿನ ಯುಗಾದಿ ಹಬ್ಬವನ್ನು ನೆಮ್ಮದಿಯಾಗಿ ಹಬ್ಬ ಆಚರಿಸಲು ಆಗುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ…

Leave a Reply

Your email address will not be published. Required fields are marked *

error: Content is protected !!