ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಬಲ್ಕರ್ ಲಾರಿ ಪಲ್ಟಿಯಾಗಿರುವ ಘಟನೆ ತಡರಾತ್ರಿ ಸುಮಾರು 10:30ರಲ್ಲಿ ನಗರದ ಪಿಎಸ್ ಐ ಜಗದೀಶ್ ವೃತ್ತ (ರಾಜಶ್ರೀ ಕಂಫರ್ಟ್ಸ್) ಬಳಿ ನಡೆದಿದೆ.
ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಯ ಸಂಭವಿಸಿಲ್ಲ, ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.