ಇಂಗ್ಲೆಂಡ್ ತಂಡವನ್ನು 7 ರನ್‍ಗಳಿಂದ ಮಣಿಸಿ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಫೈನಲ್‌ ಪ್ರವೇಶ: ಫೈನಲ್‌ ಯಾವಾಗ, ಯಾರ ನಡುವೆ, ಎಲ್ಲಿ ನಡೆಯುತ್ತೆ….?

ಮುಂಬೈ ನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ಸ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಫೈನಲ್ಸ್ ಗೆ ಪ್ರವೇಶಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ವಿರುದ್ಧ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳ ಭಾರಿ ಮೊತ್ತವನ್ನು ದಾಖಲಿಸಿತ್ತು.

42 ಎಸೆತಗಳಲ್ಲಿ 89 ರನ್ ಗಳಿಸಿದ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಭಾರತ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯಿತು.

ಬೃಹತ್ ಮೊತ್ತದ ರನ್ ಚೇಸಿಂಗ್ ನಲ್ಲಿ ಇಂಗ್ಲೆಂಡ್ ತಂಡದ ಮೇಲೆ ಭಾರತದ ಬೌಲರ್ ಗಳು ಆರಂಭದಲ್ಲಿ ನಿಯಂತ್ರಣ ಸಾಧಿಸಿದ್ದರು. ಆದರೆ ಜಾಕೋಬ್ ಬೆಥೆಲ್ ಅವರ ಆಕರ್ಷಕ ಚೊಚ್ಚಲ ಶತಕ (48ಎಸೆತಗಳಲ್ಲಿ 105) ದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡಿತ್ತು. ಆದರೂ ಇಂಗ್ಲೆಂಡ್ ತಂಡದ ಉಳಿದ ಬ್ಯಾಟ್ಸ್ಮನ್ ಗಳ ವೈಫಲ್ಯದಿಂದಾಗಿ ಬೆಥೆಲ್ ಏಕಾಂಗಿ ಹೋರಾಟ ವ್ಯರ್ಥವಾಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಭಾರತದ ಎದುರು ಸೋಲೊಪ್ಪಿಕೊಂಡಿತು.

ಹೀಗಾಗಿ ಮಾರ್ಚ್ 8ರ ಭಾನುವಾರ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ.

ಭಾರತ 20 ಓವರ್ ಗಳಲ್ಲಿ 253/4, ಸಂಜು ಸ್ಯಾಮ್ಸನ್ 89(42), ಶಿವಂ ದುಬೆ 43(25), ಇಶಾನ್ ಕಿಶನ್ 39(18), ಹಾರ್ದಿಕ್ ಪಾಂಡ್ಯ 27(12), ತಿಲಕ್ ವರ್ಮಾ 21(7), ವಿಲ್ ಜಾಕ್ಸ್ 40ಕ್ಕೆ 2, ಆದಿಲ್ ರಶೀದ್ 41ಕ್ಕೆ 2.

ಇಂಗ್ಲೆಂಡ್ 20 ಓವರ್ ಗಳಲ್ಲಿ 246/7, ಜಾಕೋಬ್ ಬೆಥೆಲ್ 105(48), ವಿಲ್ ಜಾಕ್ಸ್ 35(20), ಜಾಸ್ ಬಟ್ಲರ್ 25(17), ಜೋಫ್ರಾ ಆರ್ಚರ್ ನಾಟೌಟ್ 19(4), ಹಾರ್ದಿಕ್ ಪಾಂಡ್ಯ 38ಕ್ಕೆ 2, ಜಸ್ಪ್ರೀತ್ ಬುಮ್ರಾ 33ಕ್ಕೆ 1.

Leave a Reply

Your email address will not be published. Required fields are marked *

error: Content is protected !!