ಬಾಮೈದರ ಹಣದಾಹಕ್ಕೆ ಮನೆಯಿಂದ ಬೀದಿಗೆ ಬಂದ ತಾಯಿ ಮಕ್ಕಳು: ತನ್ನದೆ ಮನೆಗಾಗಿ ತನ್ನ ಮನೆಯ ಮುಂದೆಯೇ ಧರಣಿ ಕೂತ ಗೃಹಿಣಿ

ತನ್ನದೆ ಮನೆಗಾಗಿ ತನ್ನ ಮನೆಯ ಮುಂದೆಯೇ ಪ್ರತಿಭಟನೆ ನಡೆಸುತ್ತಿರುವ ಗೃಹಿಣಿ. ಹದಿನಾಲ್ಕು ವರ್ಷ ಸಂಸಾರ ನಡೆಸಿದ ಮನೆಗೆ ಪ್ರವೇಶ ನೀಡದ ಗಂಡನ ಕಡೆಯವರು. ಬೀದಿಗೆ ಬಂದ ಹೆಣ್ಣು ಮಗಳ ತಾಯಿ.

ಗೃಹಿಣಿಗೆ ಒಂದು ಗಂಡು, ಒಂದು ಹೆಣ್ಣು ಇಬ್ಬರು ಮಕ್ಕಳನ್ನು ಸಾಕುವ ಹೊಣೆ ಹೊತ್ತ ಆಕೆ ಪ್ರತಿಭಟನೆ ದಾರಿ ತುಳಿದಿದ್ದಾಳೆ, ನನ್ನ ಮನೆ.. ನನ್ನ ಹಕ್ಕು..ನನ್ನ ಕಾನೂನು.. ನನ್ನ ಸಂವಿಧಾನ ಅಂತಾ ಬೋರ್ಡ್ ಹಿಡಿದು ಧರಣೆ ಕುಳಿತಿರುವ ಆಕೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.

ತನ್ನ ಮನೆಗಾಗಿ ಧರಣಿ ಕೂತಿರುವ ಗೃಹಿಣಿ ಹೆಸರು ಪುಷ್ಪವತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗಾಳಿಪೂಜೆ ಗ್ರಾಮದವರು, ಹದಿನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಹೆಗಡೆ ನಗರದ ಮುಂಜುನಾಥ್ ಈಕೆಯನ್ನು ಮದುವೆ ಆಗಿದ್ದನು. ಹೆಗಡೆ ನಗರದ 1ನೇ ಕ್ರಾಸ್ ನಲ್ಲಿ ವಾಸವಾಗಿದ್ದರು, ಇವರ ದಾಪಂತ್ಯಕ್ಕೆ ಒಂದು ಹೆಣ್ಣು ಒಂದು ಗಂಡು ಮಗ ಇತ್ತು, ಮಂಜುನಾಥ್ ಸಹೋದರರು ಸಹ ಜೊತೆಯಲ್ಲಿ ವಾಸವಾಗಿದ್ದರು, ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಅಣ್ಣನ ಅಸಹಾಯಕತೆಯನ್ನ ಬಂಡವಾಳ ಮಾಡಿಕೊಂಡ ತಮ್ಮಂದಿರಾದ ಸುರೇಶ್ ಮತ್ತು ಅಂಜಿನಪ್ಪ ಅಣ್ಣ ಮನೆಯನ್ನ ಹೊಡೆಯುವ ಸಂಚು ನಡೆಸಿದ್ದಾರೆ, ಅಣ್ಣನಿಗೆ ಕುಡಿಸಿ ಇಲ್ಲದ ಸಲ್ಲದ ಚಾಡಿ ಹೇಳಿ ಗಂಡ ಹೆಂಡತಿಯರ ನಡುವೆ ವಿರಸ ಮೂಡಿಸಿದ್ದಾರೆ, 20 ಲಕ್ಷ ಹಣಕ್ಕೆ ಮನೆಯನ್ನ ಖರೀದಿ ಮಾಡಿದ್ದಾರೆ, ಆದರೆ 20 ಲಕ್ಷ ಹಣದಲ್ಲಿ ಒಂದು ರೂಪಾಯಿಸ ಸಹ ನಮ್ಮ ಕೈಗೆ ಬಂದಿಲ್ಲ ಎಂಬುದು ಪುಷ್ಪಲತಾರ ಆರೋಪ.

ಮಂಜುನಾಥ್ ತಾಯಿ ಲಕ್ಷಮ್ಮರವರಿಗೆ ಸರ್ಕಾರದಿಂದ ಮಂಜೂರಾದ ಸೈಟ್ ನಲ್ಲಿ ಮೂವರು ಸಹೋದರರು ಬೇರೆ ಬೇರೆ ವಾಸವಾಗಿದ್ದರು, ಮಂಜುನಾಥ್ ಭಾಗಕ್ಕೆ 500 ಅಡಿಗಳ ಮನೆ ಸಿಕ್ಕಿತ್ತು, ಮಂಜುನಾಥ್ ಸ್ವಿಗ್ಗಿಯಲ್ಲಿ ಕೆಲಸ ಮಾಡಿ ಪುಷ್ಪಲತಾ ಮನೆಕೆಲಸ ಮಾಡಿ ಇಬ್ಬರು ಮಕ್ಕಳನ್ನು ಸಾಕುತ್ತಿದ್ದರು, ಮಂಜುನಾಥ್ ರವರ ಮಾನಸಿಕ ಸ್ಥಿತಿ ಇತ್ತಿಚೇಗೆ ಸರಿ ಇರಲಿಲ್ಲ, ಇದನ್ನ ಬಳಸಿಕೊಂಡು ತಮ್ಮಂದಿರಾದ ಸುರೇಶ್ ಮತ್ತು ಅಂಜಿನಪ್ಪ ನಕಲಿ ದಾಖಲೆಗಳ ಮೂಲಕ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂಬುದು ಪುಷ್ಪಲತಾರ ಆರೋಪ.

ಮೇ 26 ರಂದು ಸಂಜೆ 6:30 ಸಮಯದಲ್ಲಿ ಪುಷ್ಪಲತಾ ದೇವಸ್ಥಾನಕ್ಕೆ ಹೋಗಿದ್ದ ಸಮಯದಲ್ಲಿ ಮನೆಗೆ ನುಗ್ಗಿದ ಸುರೇಶ್ ಮನೆಯಲ್ಲಿದ್ದ ಸಾಮಾನುಗಳನ್ನು ಬೇರೆಗೆ ಸಾಗಿಸಿದ್ದಾರೆ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂಬ ಆರೋಪ ಸಹ ಇದೆ, ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಹೇಗೆ ಮನೆಯಲ್ಲಿದ್ದ ಸಾಮಾನುಗಳನ್ನ ಬೇರೆಡೆ ಸಾಗಿಸಿ ಮನೆಗೆ ಬೀಗಿ ಹಾಕಿದ್ದಾರೆಂಬುದು ಪುಷ್ಪಲತಾರ ಪ್ರಶ್ನೆಯಾಗಿದೆ.

ಸದ್ಯ ವಾಸವಾಗಿದ್ದ ಮನೆಯನ್ನ ಕಳೆದು ಕೊಂಡಿರುವ ಪುಷ್ಪಲತಾ ನೆಲೆ ಇಲ್ಲದೆ ಮಕ್ಕಳೊಂದಿಗೆ ಬೀದಿಗೆ ಬಂದಿದ್ದಾರೆ.

ಪುಷ್ಪಲತಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಸಹೋದರ ಸುರೇಶ್, ಪುಷ್ಪಲತಾ ಹೆಂಡತಿಯಾಗಿ ನನ್ನ ಅಣ್ಣನನ್ನ ಸರಿಯಾಗಿ ನೋಡಿ ಕೊಳ್ಳುತ್ತಿರಲಿಲ್ಲ, ಮನೆ ಖರೀದಿಗೆ ಸಂಬಂಧಿಸಿದಂತೆ 20 ಲಕ್ಷ ಹಣವನ್ನ ಕೊಡಲಾಗಿದೆ, ಅದರೆ ಈ ಹಣವನ್ನ ಖರ್ಚು ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆಂದು ಹೇಳುತ್ತಾರೆ.

ಮಂಜುನಾಥ್ ಮನೆ ಖರೀದಿ ಮಾಡುವಾಗ ಪುಷ್ಪಲತಾರವ ಸಹಿ ಇರ ಬೇಕಿತ್ತು, ಆದರೆ ಮಂಜುನಾಥ್ ರವರ ಸಹಿಯೊಂದಿಗೆ ಖರೀದಿ ಮಾಡಿರೋದು ಅನುಮಾನಕ್ಕೆ ಎಡೆ ಮಾಡಿದೆ, ಮನೆ ಖರೀದಿ ಮಾಡುವಾಗ 20 ಲಕ್ಷ ಹಣವನ್ನ ನಗದು ರೂಪದಲ್ಲಿ ಕೊಟ್ಟಿರುವುದ್ದಾಗಿ ಹೇಳುತ್ತಿರುವುದು ಸಹ ಅನುಮಾನ ಮೂಡಿಸಿದೆ.

ಮನೆಯ ಭಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ನಡೆಯುತ್ತಿದೆ, ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮನೆಯಲ್ಲಿದ್ದ ವಸ್ತುಗಳನ್ನ ಬೇರೆಡೆ ಸಾಗಿಸಿ ಬೀಗ ಹಾಕಿದ್ದಾರೆ, ಮನೆಯ ಬಳಿ ಹೋದರೆ ಹಲ್ಲೆ ನಡೆಸುತ್ತಾರೆ, ಜೀವ ಬೆದರಿಕೆಯನ್ನ ಹಾಕುತ್ತಿದ್ದಾರೆಂದು ಪುಷ್ಪ ಕಣ್ಣೀರು ಹಾಕುತ್ತಿದ್ದಾರೆ, ಮನೆಯನ್ನ ಖರೀದಿ ಮಾಡುವಾಗ ಕೇವಲ ಗಂಡನ ಸಹಿ ಹಾಕಿಸಿದ್ದಾರೆ ವಿನಹಃ ತನ್ನ ಸಹಿಯೇ ಇಲ್ಲದೆ ನಕಲಿ ದಾಖಲೆ ಸೃಷ್ಠಿಸಿ ಮನೆಯನ್ನ ಬರೆಸಿಕೊಂಡಿದ್ದಾರೆಂಬುದು ಪುಷ್ಪಲತಾರ ಆರೋಪವಾಗಿದೆ.

Leave a Reply

Your email address will not be published. Required fields are marked *