ಯೂರಿಯಾ ಅಕ್ರಮ ದಾಸ್ತಾನು ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ…18 ಲಕ್ಷ ಮೌಲ್ಯದ ಗೊಬ್ಬರ ವಶ..1296 ಮೂಟೆ ಯೂರಿಯಾ ವಶ…

ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 18 ಲಕ್ಷ ಮೌಲ್ಯದ 1296 ಮೂಟೆ ಯೂರಿಯಾ ವಶಪಡಿಸಿಕೊಂಡಿದ್ದಾರೆ.

ಹುಣಸೂರಿನ ಸಾಲುಮರದ ತಿಮ್ಮಕ್ಕ ಉದ್ಯಾನವನದ ಮುಂಭಾಗವಿರುವ ಶೆಡ್ ಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮಾಹಿತಿ ಅರಿತು ದಾಳಿ ನಡೆಸಿದ್ದಾರೆ.

ಸರ್ಕಾರದಿಂದ ಬಿಡುಗಡೆಯಾಗಿ ರೈತರಿಗೆ ಸೇರಬೇಕಿದ್ದ  ಗೊಬ್ಬರ ಖದೀಮ ದಂಧೆಕೋರರಿಂದ ವಶಪಡಿಸಿಕೊಂಡಿದ್ದಾರೆ.ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ.

ಮೂರು ಲಾರಿಗಳನ್ನ ವಶಪಡಿಸಿಕೊಳ್ಳಲಾಗಿದೆ.ಖಾಸಗಿ ಕಂಪನಿ ಹೆಸರಿನ ಚೀಲಗಳಿಗೆ ಬದಲಾಯಿಸಿ ಮಾರಾಟ ಮಾಡುವ ದಂಧೆ ಎಂದು ಶಂಕಿಸಲಾಗಿದೆ.ಚೀಲ ಬದಲಿಸಿವಕೇರಳಾ ರಾಜ್ಯಕ್ಕೆ ಸಾಗಿಸುವ ಶಂಕೆ ವ್ಯಕ್ತವಾಗಿದೆ.ಸಹಾಯಕ ಕೃಷಿ ಅಧಿಕಾರಿ ಅನಿಲ್ ಹಾಗೂ ಕೃಷಿ ಅಧಿಕಾರಿ ಜಯಕುಮಾರ್ ರವರು ಪೊಲೀಸರ ನೆರವಿನಿಂದ ದಾಳಿ ನಡೆಸಿದ್ದಾರೆ.

ಖಾಸಗಿ ಸಂಸ್ಥೆಯ ಬ್ರಾಂಡ್ ಇರುವ ಚೀಲಗಳು ಸ್ಥಳದಲ್ಲಿ ಪತ್ತೆಯಾಗಿದೆ.ಗೊಬ್ಬರ ಕಾಳಸಂತೆ ರಾಕೆಟ್ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.ರಾಕೆಟ್ ಹಿಂದೆ ಪ್ರಭಾವಿ ಕೈಗಳ ಬೆಂಬಲ ಇರುವ ಶಂಕೆ ಇದೆ.ಇದರ ಹಿಂದಿನ ಜಾಲ ಪತ್ತೆ ಹಚ್ಚಲು ಕೃಷಿ ಇಲಾಖೆ ಅಧಿಕಾರಿಗಳು ಒತ್ತು ನೀಡಬೇಕಿದೆ.ಬಡ ರೈತರಿಗೆ ಸೇರಬೇಕಾದ ಗೊಬ್ಬರ ಕಾಳಸಂತೆಕೋರರ ಪಾಲಾಗಿರುವ ಬಗ್ಗೆ ತೆನಿಖೆ ನಡೆಸಬೇಕಿದೆ.

ಹುಣಸೂರು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ…

Leave a Reply

Your email address will not be published. Required fields are marked *

error: Content is protected !!