ರೈಲ್ವೇ ಪೊಲೀಸರ ತುರ್ತು ಸ್ಪಂದನೆ – 19 ಲಕ್ಷ ಮೌಲ್ಯದ ಬ್ಯಾಗ್‌ ಹುಡುಕಿಕೊಟ್ಟ‌ RPF ಟೀಮ್…!!

ಕಳೆದುಕೊಂಡಿದ್ದ ಬ್ಯಾಗ್ ಹುಡುಕಿ ಕೆಲವೇ ಸಮಯದಲ್ಲಿ ಮಾಲೀಕನ ಕೈಗೆ ಒಪ್ಪಿಸಿದ ಘಟನೆ ಯಲಹಂಕದಲ್ಲಿ‌ ನಡೆದಿದೆ. 19 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ನ್ನು RPF ಟೀಮ್ ಹುಡುಕಿಕೊಟ್ಟಿದೆ.

ಯಲಹಂಕ ರೈಲು ನಿಲ್ದಾಣದಲ್ಲಿ ಎಂಟನೇ ತಾರೀಖಿನಂದು, 100 ಗ್ರಾಂ ಚಿನ್ನಾಭರಣ‌ ಸೇರಿ ನಗದು ಹಣವನ್ನ ಬ್ಯಾಗ್ ನಲ್ಲಿಟ್ಟಿದ್ದ ಪ್ರಯಾಣಿಕ ಬ್ಯಾಗ್ ಕಳೆದು ಹೋಗಿರುವ ಬಗ್ಗೆ ದೂರು ನೀಡಿದ್ದ.

RPF ಪೊಲೀಸರು ಶೋಧ ಆರಂಭಿಸಿ ಕೆಲ ಸಮಯದಲ್ಲೇ ಮಾಲೀಕನಿಗೆ ಬ್ಯಾಗ್ ಒಪ್ಪಿಸಿದ್ದಾರೆ‌. RPF ಸಿಬ್ಬಂದಿಯ ಸ್ಪಂದನೆಗೆ ಪ್ರಯಾಣಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!