ಕನಕಪುರ ಶ್ರೀನಿವಾಸ್ ವಿವಾದಾತ್ಮಕ ಮಾತಿಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಖಡಕ್ ರಿಯಾಕ್ಷನ್: ಕನಕಪುರ ಶ್ರೀನಿವಾಸ್ ಮಾತಾಡಿದ್ದು ತುಂಬಾ ತಪ್ಪು, ಮನಸ್ಸಿಗೆ ಬಹಳ ಬೇಜಾರ್ ಆಗ್ತಿದೆ…ನಾವು ಕ್ಷಮಿಸೋದೇ ಇಲ್ಲ ಎಂದ ಶ್ರೀಮುರುಳಿ

ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅನೇಕರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್, ಧ್ರುವ ಸರ್ಜಾ, ಎ.ಪಿ. ಅರ್ಜುನ್, ಜೋಗಿ ಪ್ರೇಮ್, ಪುನೀತ್ ರಾಜ್​ಕುಮಾರ್ ಸೇರಿದಂತೆ ಹಲವರ ವಿರುದ್ಧ ಅವರು ಅಶ್ಲೀಲವಾಗಿ ಮಾತನಾಡಿದ್ದರು. ಅದಕ್ಕೆ ಚಿತ್ರರಂಗದಲ್ಲಿ ಖಂಡನೆ ವ್ಯಕ್ತವಾಗಿದೆ.

ಈ ಕುರಿತು ದೊಡ್ಡಬಳ್ಳಾಪುರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಮಾಧ್ಯಮದವರಿಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು… ನಮಗೆಲ್ಲಾ ದೊಡ್ಡವರು ಡಾ.ರಾಜ್ ಕುಮಾರ್ ಅವರು ಒಂದು ಮಾತು ಹೇಳಿದ್ದರು, ಏನೆಂದರೆ ನಿರ್ಮಾಪಕರು ಅನ್ನದಾತರು ಅಂತಾ. ಅವರ ಮಾತನ್ನು ಚಾಚೂ ತಪ್ಪದೇ ನಿರ್ಮಾಪಕರನ್ನು ಗೌರವದಿಂದ ಕಾಣುತ್ತೇವೆ. ಕಲಾವಿದರ ಹತ್ತಿರ ಕೆಲಸ ಮಾಡಿಸಿಕೊಳ್ಳುವಾಗ ಒಂದು ರೀತಿ, ಕೆಲಸ ಮುಗಿದ ನಂತರ ಒಂದು ರೀತಿ, ಯಾವುದೋ ಒಂದು ಘಟನೆ ಇಟ್ಟುಕೊಂಡು ಬೇಜವಾಬ್ದಾರಿ ತನದಿಂದ ಮಾತನಾಡಿರುವುದು ನನಗೆ ಇಷ್ಟವಾಗಿಲ್ಲ. ಕಲಾವಿದರು ಎಂದ ಮೇಲೆ ಕಲಾವಿದರೆ. ಕಲಾವಿದರಿಗೆ ಮನೆ, ಸಂಸಾರ, ಜವಾಬ್ದಾರಿ ಎಲ್ಲಾ ಇರುತ್ತೆ. ಇಲ್ಲದೇ ಇರುವವರ ಬಗ್ಗೆ ಮಾತಾಡೋದು, ಇನ್ಯಾರದೋ ಬಗ್ಗೆ ಮಾತಾಡೋದು ಇದೆನ್ನೆಲ್ಲಾ ಏನಕ್ಕೆ ಮಾಡಬೇಕು. ನಾವೆಲ್ಲಾ ಕೆಲಸ ಮಾಡ್ತಿರೋದು ತಾಯಿ ಭುವನೇಶ್ವರಿಗೋಸ್ಕರ. ಕಷ್ಟ ಯಾರಿಗೆ ಬರಲ್ಲ, ನಮಗೂ ಕಷ್ಟ ಇದೆ, ಇಗಲೂ ಕಷ್ಟ ಇದೆ. ಆ ಕಷ್ಟಾನ ಪರಿಹಾರ ಮಾಡಿಕೊಂಡು ಹೋಗ್ತಾನೆ ಇದಿವಿ. ಕಷ್ಟ ಇದೆ ಅಂತಾ ಹೇಳಿ ಬೀದಿಗಿಳಿದು ಬೇರೆಯವರನ್ನ ಅವಮಾನ ಮಾಡುತ್ತಿದ್ದೀವಾ ಎಂದು ಹೇಳಿದರು.

ನಿರ್ಮಾಪಕರು ಹಿರಿಯರು, ಹಿರಿಯರ ಸ್ಥಾನದಲ್ಲಿದ್ದಾರೆ.. ಸ್ಪಲ್ಪ ಯೋಚನೆ ಮಾಡಿ ಮಾತಾಡಬೇಕು. ಬಹಳ ಸೂಕ್ಷ್ಮ ವಿಚಾರಗಳು, ವ್ಯಕ್ತಿಗಳ ಬಗ್ಗೆ ಮಾತನಾಡಿದ್ದಾರೆ.. ಇದು ಬಹಳ ತಪ್ಪಾಗಿ ಕಾಣುತ್ತಿದೆ. ಅದೇರೀತಿ ತಪ್ಪಾಗಿ ಕೇಳುತ್ತಿದೆ.. ಇದು ಇಲ್ಲಿಗೆ ನಿಲ್ಲಬೇಕು. ಚಿತ್ರರಂಗದ ಹಿರಿಯರು ಮುಂದೆ ಬಂದು ಕೂಡಲೇ ಇದನ್ನ ಇಲ್ಲಿಗೆ ನಿಲ್ಲಿಸಬೇಕು..ಇದು ಕೂಡು ಕುಟುಂಬ ಅವಿಭಕ್ತ ಕುಟುಂಬ ಇದ್ದ ಹಾಗೇ, ಈ ಕೂಡು ಕುಟುಂಬ ಹೊಡೀಬಾರದು, ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕು ಎಂದರು…

ಯಾವ ನಟರೂ ಅಷ್ಟೋಂದು ಕೆಟ್ಟವರಲ್ಲ. ನಟರ ಬಗ್ಗೆ ಏಕೆ ಹಾಗೆ ಮಾತಾಡಬೇಕಿತ್ತು, ಏನಕ್ಕೆ ಆ ರೀತಿ ಮಾತಾಡಬೇಕಿತ್ತು. ಇದು ಕೇಳಕ್ಕೆ ಏಕೋ ಚೆನ್ನಾಗಿಲ್ಲ. ನೋಡಕ್ಕೂ ಚೆನ್ನಾಗಿಲ್ಲ ಅದಕ್ಕೆ ಕೇಳಿಲ್ಲ, ನೋಡಿಲ್ಲ. ಕೆಲವೊಂದು ಸೂಕ್ಷ್ಮ ವಿಚಾರಗಳು, ಸೂಕ್ಷ್ಮ ವ್ಯಕ್ತಿಗಳ ಬಗ್ಗೆ ಗಂಭೀರವಾಗಿ, ಆಲೋಚನೆ ಮಾಡಿ ಮಾತಾಡು ವಿಷಯಗಳನ್ನ ಬಹಳ ದುರುಪಯೋಗಪಡಿಸಿಕೊಂಡು ಮಾತನಾಡಿರುವುದು ಖಂಡನೀಯ ಎಂದು ತಿಳಿಸಿದರು.

ಅಪ್ಪು ಅವರ ಬಗ್ಗೆ ಮಾತನಾಡಿರುವುದಕ್ಕೆ ಕ್ಷಮಾಪಣೆನೇ ಇಲ್ಲ.‌ ಈ ವಿಚಾರದಲ್ಲಿ ನಾವು ಕ್ಷಮಿಸೋದೇ ಇಲ್ಲ. ನಾವು ಯಾರಿಗೆ ಏನ್ ಮಾಡಿದ್ದೀವಿ…. ಇಷ್ಟೋಂದು ದಿನಗಳಿಂದ ಇಂಡಸ್ಟ್ರಿಗೋಸ್ಕರ, ಸಿನಿಮಾಗೋಸ್ಕರ, ಕಲೆಯನ್ನು ಉಳಿಸಲು ಕೆಲಸ ಮಾಡಿಕೊಂಡು ಬಂದಿದ್ದೇವೆ. ಸಿನಿಮಾಯಿಂದನೇ ಬದುಕುತಿದ್ದೇವೆ. ಕಷ್ಟನೋ ಸುಖಾನೋ ಇಲ್ಲೇ ಮುಳುಗುತ್ತಿದ್ದೇವೆ, ಇಲ್ಲೇ ಎದ್ದೇಳುತ್ತಿದ್ದೇವೆ ಎಂದರು..

ಸಿನಿಮಾ ಇಂಡಸ್ಟ್ರಿ ಎಂಬ ಮನೆಯಲ್ಲಿ ಹಿರಿಯರು ಕೆಲವರು ಇಲ್ಲ. ಅವರ ಬದಲಿಗೆ ಕೆಲವರು ಮನೆಯ ಜವಾಬ್ದಾರಿ ತಗೋಂಡಿದ್ದಾರೆ.‌ ಇದೆನ್ನೆಲ್ಲಾ ಅವರು ಗಮನಹರಿಸುತ್ತಿದ್ದಾರೆ.. ಇದಕ್ಕೆ ಕ್ರಮ ತಗೋತಾರೆ ಎಂದು ಹೇಳಿದರು…

Leave a Reply

Your email address will not be published. Required fields are marked *

error: Content is protected !!