ಶಾಲಾ ಅಡುಗೆ ಸಿಬ್ಬಂದಿ ಗೌರವ ಧನ ಹೆಚ್ಚಿಸಲು ಮುಷ್ಕರ, ಮನವಿ

ಗೌರವ ಧನ ಹೆಚ್ಚಿಸುವಂತೆ ಶಾಲಾ ಅಡುಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಒ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗೌರವ ಧನ ಹೆಚ್ಚಿಸುವಂತೆ ಮನವಿ ಪತ್ರ ನೀಡುವ ಮೂಲಕ ಸರ್ಕಾರ ಗಮನಕ್ಕೆ ತರಲು ಆಗ್ರಹಿಸುತ್ತಿದ್ದಾರೆ.

ಅದೇ ರೀತಿ ಇಂದು ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಅಡುಗೆ ಸಿಬ್ಬಂದಿಯವರು ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಒ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗೌರವ ಧನ ಹೆಚ್ಚಿಸುವ ಕುರಿತು ಮನವಿ ಪತ್ರ ಸಲ್ಲಿಸಿದರು…

ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಅಡುಗೆ ಸಿಬ್ಬಂದಿಯವರಿಗೆ 4700‌ ರೂ. ಮತ್ತು ಸಹಾಯಕ ಅಡುಗೆ ಸಿಬ್ಬಂದಿಗೆ 4600 ರೂ. ಮಾಸಿಕ ಗೌರವ ಧನ ನೀಡಲಾಗುತ್ತಿದ್ದು, ಈ ಗೌರವ ಧನವು ತುಂಬಾ ಕಡಿಮೆಯಾಗಿದೆ. ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಸರ್ಕಾರ ನೀತಿಯಾದ ಕನಿಷ್ಠ ವೇತನವನ್ನು ನಮಗೂ ಅನ್ವಯವಾಗುವಂತೆ ಜಾರಿ ಮಾಡಬೇಕು. ವರ್ಷ ಬಜೆಟ್ ಮಂಡಿಸುವಾಗ ನಮ್ಮ ಗೌರವ ಧನ ಹೆಚ್ಚಿಸಬೇಕು. ಗೌರವ ಧನ ಹೆಚ್ಚಿಸಲು ಒತ್ತಾಯಿಸುತ್ತಿರುವ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು..

ಈ ವೇಳೆ ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಅಡುಗೆ ಸಿಬ್ಬಂದಿ ಇದ್ದರು…

Leave a Reply

Your email address will not be published. Required fields are marked *

error: Content is protected !!