ಆರತಕ್ಷತೆಗೆ ತೆರಳುವಾಗ ಅಡ್ಡಗಟ್ಟಿ ವರನಿಗೆ ಚಾಕು ಇರಿತ ಕೇಸ್​​​ಗೆ ಬಿಗ್ ಟ್ವಿಸ್ಟ್​: ಮದ್ವೆಯಾಗಬೇಕಿದ್ದವಳೇ ವಿಲನ್.!

ಚಾಮರಾಜನಗರದ ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವರ ರವೀಶ್ ಗೆ ಚಾಕು ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ.

ರವೀಶ್​​ನ ಮದ್ವೆಯಾಗಬೇಕಿದ್ದ ವಧು ನಯನಾ, ಪ್ರಿಯಕರ ದರ್ಶನ್​, ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಸಲಿಯತ್ತು ಬಯಲಾಗಿದೆ. ಮದುವೆ ನಿಲ್ಲಿಸಲು ಪ್ರಿಯಕರನ ಜೊತೆ ಸೇರಿ ನಯನಾ (ರವೀಶ್​​ನ ಮದ್ವೆಯಾಗಬೇಕಿದ್ದ ಯುವತಿ) ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎನ್ನುವುದು ಕೊಳ್ಳೇಗಾಲ ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.​

ತಮಟೆ ಹೊಡೆಯುವ ಕೆಲಸ ಮಾಡ್ತಿದ್ದ ದರ್ಶನ್​ ಎನ್ನುವಾತನನ್ನು ನಯನಾ ಲವ್ ಮಾಡುತ್ತಿದ್ದಳು. ಆದ್ರೆ,​​ ದರ್ಶನ್ ಕೆಲಸದ ಬಗ್ಗೆ ಮನೆಯಲ್ಲಿ ಹೇಳಲು ಹೆದರಿದ್ದಳು. ಹೀಗಾಗಿ ಈ ಮದುವೆ ನೀನೇ ನಿಲ್ಲಿಸು ಎಂದು ನಯನಾ, ಪ್ರಿಯಕರ ದರ್ಶನ್​​ಗೆ ಹೇಳಿದ್ದಳು.

ಅದರಂತೆ ಪ್ರಿಯಕರ ದರ್ಶನ್ ಗ್ಯಾಂಗ್, ಜನವರಿ 27ರಂದು ರವೀಶ್ ಕೊಳ್ಳೇಗಾಲದ ಕಲ್ಯಾಣ ಮಂಟಪ್ಪಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆಯೇ ಕಾರು ಅಡ್ಡಗಟ್ಟಿದ್ದು, ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಡ್ರ್ಯಾಗರ್​​ನಿಂದ ಹಲ್ಲೆ ಪರಾರಿಯಾಗಿತ್ತು.

ಬಳಿಕ ರವೀಶ್ ದಾಖಲಾಗಿದ್ದ ಆಸ್ಪತ್ರೆಗೆ ನಯನಾ ಬಂದು ತನ್ನ ಮದುವೆಯಾಗು ಎಂದು ನಾಟಕವಾಡಿದ್ದಳು. ಆದಾಗಲೇ ರವೀಶ್​​ಗೂ ಸಹ ಅನುಮಾನ ಬಂದಿದ್ದರಿಂದ ನಯನಾಳನ್ನು ಮದುವೆಯಾಗಲು ನಿರಾಕರಿಸಿದ್ದ. ಇದೀಗ ನಯನಾಳ ಅಸಲಿ ನೌಟಂಕಿ ಆಟ ಬಯಲಾಗಿದೆ.

Leave a Reply

Your email address will not be published. Required fields are marked *

error: Content is protected !!