ಬಾಲಕಿ ಹಿಂಬಾಲಿಸಿದ್ದ ಅಪರಿಚಿತ ಕೊನೆಗೂ ಪೊಲೀಸ್ ಬಲಗೆ….!

ಹಾಸನ: ಶಾಲೆಯಿಂದ ಮನೆಗೆ ಬರುವವರೆಗೂ ಬಾಲಕಿಯನ್ನು ಹಿಂಬಾಲಿಸಿ ಬಂದು ಭಯಭೀತಳಾಗಿಸಿದ್ದ ಅಪರಿಚಿತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದು ಮೂರು ದಿನಗಳ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮೂರು ದಿನಗಳ ಹಿಂದೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಅಂದರ್ ಎಂಬ ವ್ಯಕ್ತಿ ನಿರಂತರವಾಗಿ ಹಿಂಬಾಲಿಸಿ, ಕೈ ಸನ್ನೆ ಮೂಲಕ ಅವಾಚ್ಯವಾಗಿ ವರ್ತಿಸಿ ಆವಾಜ್ ಹಾಕಿದ್ದಾನೆ. ಇದರಿಂದ ಬಾಲಕಿ ತೀವ್ರ ಭಯಕ್ಕೆ ಒಳಗಾಗಿದ್ದರೂ, ಅದೃಷ್ಟವಶಾತ್ ಆತನ ಕೈಗೆ ಸಿಗದೆ ಪಾರಾಗುತ್ತಿದ್ದಳು. ಘಟನೆಯ ದೃಶ್ಯಗಳು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಬಾಲಕಿಯ ಪೋಷಕರು ಪೆನ್ನನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ಮುಖ ಗುರುತು ಮಾಡಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈಗ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!