ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ 23ರ ಹರೆಯದ ಯುವಕನ ಬಂಧನ.!: ಕದ್ದ ಉಡುಪುಗಳನ್ನು ಏನು ಮಾಡುತ್ತಿದ್ದ ಗೊತ್ತಾ…..?

ಬೆಂಗಳೂರಿನ ಹೆಬ್ಬಗೋಡಿ ಬಳಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಕೇರಳ ಮೂಲದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕದ್ದ ಉಡುಪುಗಳನ್ನು ಧರಿಸುತ್ತಿದ್ದನು ಮತ್ತು ಆತನ ಮನೆಯಲ್ಲಿ ಹಾಗೂ ಮೊಬೈಲ್‌ನಲ್ಲಿ ಮಹಿಳೆಯರ ಒಳ ಉಡುಪುಗಳು ಪತ್ತೆಯಾಗಿವೆ.

ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ.

ಬಂಧಿತನನ್ನು ಕೇರಳ ಮೂಲದ 23ರ ಹರೆಯದ ಅಮಲ್ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಅಮಲ್ ಮಹಿಳೆಯರ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿದ್ದನು. ಕದ್ದ ಉಡುಪುಗಳನ್ನು ಅಮಲ್ ಧರಿಸಿಕೊಳ್ಳುತ್ತಿದ್ದನು ಎಂದು ತಿಳಿದು ಬಂದಿದೆ.

ಖಚಿತ ಮಾಹಿತಿಯನ್ನಾಧರಿಸಿ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಆರೋಪಿಯ ಮೊಬೈಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್‌ನಲ್ಲಿ ಮಹಿಳೆಯರ ಒಳುಉಡುಪುಗಳು ಫೋಟೋಗಳಿರೋದನ್ನು ಕಂಡು ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.

ಮಹಿಳೆಯರ ಒಳಉಡುಪುಗಳು ಪತ್ತೆ
ಆರೋಪಿ ಅಮಲ್ ವಾಸವಾಗಿದ್ದ ಮನೆಯಲ್ಲಿಯೂ ಮಹಿಳೆಯರ ಒಳಉಡುಪುಗಳು ಪತ್ತೆಯಾಗಿವೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!