ಈರುಳ್ಳಿ ತುಂಬಿದ್ದ ಲಾರಿ ಪಲ್ಟಿ: ಓರ್ವ ಸಾ*ವು – ಜೀವ ಲೆಕ್ಕಿಸದೇ ಈರುಳ್ಳಿ ಬಾಚಿಕೊಂಡ ಜನ..!!

ಈರುಳ್ಳಿ ತುಂಬಿದ್ದ ಲಾರಿ ಪಲ್ಟಿಯಾಗಿ ಒಬ್ಬ ಮೃ*ತಪಟ್ಟ ಘಟನೆ ಬೆಂಗಳೂರು ಉತ್ತರ ಮಾಕಳಿಯ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಸಾ*ವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ನಸುಕಿನಜಾವ ಆಟೋ, ಕ್ಯಾಂಟರ್ ಎರಡು ಬೈಕ್ ಗಳ ನಡುವೆ ಅಪ*ಘಾತ ನಡೆದಿದೆ. ಸೊಲ್ಲಾಪುರದಿಂದ ಈರುಳ್ಳಿ ತುಂಬಿದ ಕಂಟೈನರ್ ಲಾರಿ ಸಾಗುತ್ತಿರುವಾಗ ಎದುರಿಗಿದ್ದ ಆಟೋ ಸಡನ್ ಬ್ರೆಕ್ ಹಾಕಿದ ಕಾರಣ ಕಂಟ್ರೋಲ್ ಸಿಗದೇ ಲಾರಿ ಪಲ್ಟಿಯಾಗಿದೆ.

ಸಂಚರಿಸುತ್ತಿದ್ದ ಬೈಕ್ ಮೇಲೆ ಲಾರಿ ಬಿದ್ದ ಪರಿಣಾಮ ಬೈಕ್ ಸವಾರ ಮೃ*ತಪಟ್ಟಿದ್ದಾನೆ. ರಸ್ತೆಯಲ್ಲಿ ಬಿದ್ದ ಈರುಳ್ಳಿ ತೆಗೆದುಕೊಳ್ಳಲು ಹೆದ್ದಾರಿ ಎಂಬುದನ್ನೂ, ಮರೆತು ಪ್ರಾಣವನ್ನೂ ಲೆಕ್ಕಿಸದೇ ಈರುಳ್ಳಿಗಾಗಿ ಜನ ಮುಗಿಬಿದ್ದಿದ್ದಾರೆ‌.

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!