
ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಭವನದಲ್ಲಿ ಲೋಕಾಯುಕ್ತರು ದಾಳಿ ನಡಸಿದರು. ಅಬಕಾರಿ ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಲ್ಲಿ ನಡೆಸಿದ ಲೋಕಾಯುಕ್ತ ದಾಳಿಯಲ್ಲಿ ಅಬಕಾರಿ ಡಿಸಿ ಜಗದೀಶ್ ನಾಯಕ್, ಸೂಪರ್ ಡೆಂಟ್ ತಮ್ಮಣ್ಣ, ಲಕ್ಕಪ್ಪ ಬಲೆಗೆ ಬಿದ್ದಿದ್ದಾರೆ.
CL-7 ಲೈಸೆನ್ಸ್ ನೀಡಲು 25 ಲಕ್ಷ ಹಣ ಲಂಚ ಕೇಳಿದ್ದರು. ಹಣ ಪಡೆಯುವ ವೇಳೆ ಲೋಕಾಯುಕ್ತ ಬೀಸಿದ್ದ ಬಲೆಗೆ ಮೂವರು ಅಧಿಕಾರಿಗಳು ಬಿದ್ದಿದ್ದಾರೆ.
ಒಂದು ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಅಡ್ವಾನ್ಸ್ ಹಣವಾಗಿ 25 ಲಕ್ಷ ಪಡೆಯುವ ವೇಳೆ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.
ಲಕ್ಷ್ಮೀ ನಾರಾಯಣ ಅನ್ನೋರ ಬಳಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಸದ್ಯ ಅಬಕಾರಿ ಭವನದಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಲೋಕಾ ದಾಳಿಯಿಂದ ಎಸ್ಕೇಪ್ ಆಗಿದ್ದ ಸೂಪರಿಡೆಂಟ್ ತಮ್ಮಣ್ಣನನ್ನ ವೈಯಾಲಿಕಾವಲ್ ಬಳಿ ವಶಕ್ಕೆ ಪಡೆದು ಪೊಲೀಸರು ಕರೆತಂದಿದ್ದಾರೆ.

ಸಿಎಲ್ 7- 75 ಲಕ್ಷ, ಮೈಕ್ರೋ ಬ್ರೇವರಿ ಲೈಸೆನ್ಸ್ ಗೆ – 1.5 ಕೋಟಿ ಒಟ್ಟು 2 ಕೋಟಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು. ಕೊನೆಗೆ 2, ಕೋಟಿ 25 ಲಕ್ಷ ಕ್ಕೆ ಎರಡು ಲೈಸೆನ್ಸ್ ಕೊಡೋಕೆ ತಿರ್ಮಾನ ಮಾಡಲಾಗಿತ್ತು. ಇಂದು 25 ಲಕ್ಷ ಹಣ ಪಡೆಯುವ ವೇಳೆ ಲೋಕಾಯುಕ್ತರು ನಡೆಸಿದ ದಾ*ಳಿ ವೇಳೆ ಸಿಕ್ಕಿಬಿದ್ದಿದ್ದಾರೆ