ಪ್ರಣಯದಾಟಕ್ಕೆ ಯುವಕನ ಬಲಿ ಪಡೆದ ಬೇಬಿಗೆ ಜೀವಾವಧಿ ಶಿಕ್ಷೆ

ಲಿವಿಂಗ್ ಟುಗೆದರ್ ವಿಚಾರದಲ್ಲಿ ಯುವಕನೋರ್ವನನ್ನು ಕೊಲೆ ಮಾಡಿದ್ದ ಮಹಿಳೆಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ಶಾಹಿದ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬೇಬಿ(55) ಎಂಬಾಕೆಯೇ ಶಿಕ್ಷೆಗೆ ಗುರಿಯಾದ ಮಹಿಳೆ.

2021ರ ಫೆಬ್ರವರಿ 23ರ ರಾತ್ರಿ ಯುವುಕನೋರ್ವನನ್ನು ಬೇಬಿ ಹಾಗೂ ಬಾಡಿಗೆ ಮನೆಯ ಮಾಲೀಕರ ಅಣ್ಣ ಫಜಲುದ್ದೀನ್ ಎಂಬುವವರು ಸೇರಿ ಕೊಲೆಗೈದ ಪ್ರಕರಣಕ್ಕೆ ಸಂಬoಧಿಸಿದಂತೆ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದು, ಫಜಲುದ್ದೀನ್ ಮೃತಪಟ್ಟಿದ್ದು, ಬೇಬಿ ಶ್ರೀಕೃಷ್ಣನ ಜನ್ಮಸ್ಥಳಕ್ಕೆ ತೆರಳಿದ್ದಾರೆ.

*ಏನಿದು ಘಟನೆ*?

ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಪುಲ್‌ಪಲ್ಲಿ ನಿವಾಸಿ ಶಿಂಟೋ ತಂಗಚ್ಚನ್ (35) ಇವರು ಕೊಲೆಯಾದ ವ್ಯಕ್ತಿ.

ಮೃತ ಯುವಕ ಶಿಂಟೋ ತಂಗಚ್ಚನ್‌ನ ಪೋಷಕರು ವಯೋವೃದ್ಧರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತದ್ದು ಈತನೇ ಅವರ ಜೀವಾನಾಧರವಾಗಿದ್ದ.

ಈತನು ತನ್ನ ಊರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭದಲ್ಲಿ ವಿರಾಜಪೇಟೆ ನಗರದ ಕಲ್ಲುಬಾಣೆಯಲ್ಲಿ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಬೇಬಿ ಎಂಬಾಕೆಯ ಪರಿಚಯವಾಗಿತ್ತು.

ಕೆಲವು ದಿನಗಳವರೆಗೆ ಅಲ್ಲಿ ಕೆಲಸ ನಿರ್ವಹಿಸಿದ ನಂತರ ವಿರಾಜಪೇಟೆ ನಗರಕ್ಕೆ ಮಹಿಳೆ ಹಿಂತಿರುಗಿದ್ದಳು. ಬೇಬಿಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಶಿಂಟೋ ನಿರಂತರ ಸಂಪರ್ಕದಲ್ಲಿದ್ದ. ಇದು ಹೀಗೆಯೆ ಮುಂದುವರೆದಿತ್ತು.

ಬೇಬಿಯ ಪತಿ, ಕೆಲವು ವರ್ಷಗಳ ಹಿಂದೆ ನಿಧನರಾದ ಬಳಿಕ ತನ್ನ ಮೂವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬಿಟ್ಟು ಏಕಾಂಗಿಯಾಗಿ ಕಲ್ಲುಬಾಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.

ಮೃತ ಶಿಂಟೋ ಚಾಲಕ ವೃತ್ತಿ ಸೇರಿದಂತೆ ಎಲ್ಲಾ ರೀತಿಯ ಕೂಲಿ ಕೆಲಸಗಳಿಗೆ ಹೋಗುತ್ತಿದ್ದ. ಬೇಬಿಯ ಸಂಪರ್ಕವಾದ ಬಳಿಕ ಬೇಬಿಯ ಮನೆಗೆ ಬಂದು ಹೋಗುವುದು ಅಲ್ಲದೆ ಅಲ್ಲಿಯೇ ಆಶ್ರಯ ಪಡೆದು ಸುಮಾರು ೯ ತಿಂಗಳುಗಳಿoದ ಸಣ್ಣ ಮನೆಯಲ್ಲಿ ಇಬ್ಬರು ವಾಸವಾಗಿದ್ದರು.

ಫಜಲುದ್ದೀನ್ ಎಂಬಾತ ಪತ್ರಿಕೆ ವಿತರಕನಾಗಿ ಕೆಲಸ ಮಾಡಿಕೊಂಡಿದ್ದವನು ಕೆಲವು ಸಮಯದಿಂದ ಪತ್ರಿಕ ವಿತರಣೆಯನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಇದ್ದನು. ಅಲ್ಲಿಯೇ ಇದ್ದವನು ಬೇಬಿಯ ಮನೆಗೆ ಹೋಗಿ ಬರುವುದು ಮಾಡುತ್ತಿದ್ದ. ಇದನ್ನು ಸಹಿಸದ ಶಿಂಟೋ ಕಂಠಪೂರ್ತಿ ಕುಡಿದು ಬಂದು ಬೇಬಿ ಹಾಗೂ ಫಜಲುದ್ದೀನ್‌ನೊಂದಿಗೆ ಜಗಳ ಮಾಡುತ್ತಿದ್ದನು.

ಇದು ಮುಂದುವರಿದು 2021ರ ಫೆ.23ರ ರಾತ್ರಿ ಮೂವರ ಮಧ್ಯೆ ಕದನ ಏರ್ಪಟ್ಟಿತ್ತು. ಬೇಬಿ ಕೂಡ ಸಂಜೆ ವೇಳೆಗೆ ಮದ್ಯಪಾನ ಮಾಡುತ್ತಿದ್ದರಿಂದ ಕದನ ಮಿತಿಮೀರಿತ್ತು. ಇದನ್ನು ಬೇಬೆ ಹಾಗೂ ಫಜಲುದ್ದೀನ್ ಸಹಿಸಿಕೊಂಡಿರಲಿಲ್ಲ. ಅಜಾನುಬಾಹು ಆಗಿದ್ದ ಶಿಂಟೋನನ್ನ ಮುಗಿಸಲು ಇಬ್ಬರು ತೀರ್ಮಾನ ಮಾಡಿಕೊಂಡು ಮೊದಲೇ ನಿರ್ಧರಿಸಿದಂತೆ ಮಲಗಿದ್ದ ಶಿಂಟೋನ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ ಮಾಡಿ ಏನು ಗೊತ್ತಿಲ್ಲದಂತೆ ಬೇಬಿ ಸುಮ್ಮನಿದ್ದುಬಿಟ್ಟಿದ್ದಾರೆ.

ಸಂಶಯ ಬಾರದ ರೀತಿಯಲ್ಲಿ ಫಜಲುದ್ದೀನ್ ಮನೆಗೆ ಹಿಂದಿರುಗುತ್ತಾನೆ. ಮರುದಿನ ಬೆಳಗ್ಗೆ ಅಂದರೆ ಫೆ. 24ರಂದು ಬಾಡಿಗೆ ಮನೆಯಲ್ಲಿ ಯುವಕ ಮರಣ ಹೊಂದಿರುವ ಬಗ್ಗೆ ನಗರ ಪೊಲೀಸ್ ಠಾಣೆಗೆ ಮನೆ ಮಾಲೀಕರು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಕರೆಯ ಆಧಾರದ ಮೇಲೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮೃತ ಶರೀರವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗುತ್ತದೆ.

ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೇಲ್ನೋಟಕ್ಕೆ ಆಕಸ್ಮಿಕ ಸಾವು ತಿಳಿದು ಬಂದರು ಮೃತ ಶರೀರದ ಮೇಲಿರುವ ಗಾಯಗಳಿಂದ ಶಂಕೆ ವ್ಯಕ್ತಪಡಿಸಿದ್ದರು.
ಶವಪರೀಕ್ಷೆ ನಡೆಸಿದ ಕೊಡಗು ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರು, ವ್ಯಕ್ತಿಯನ್ನು ಕತ್ತು ಹಿಸುಕಿ ಸಾಯಿಸಿರುವುದಾಗಿ ಮರಣೋತ್ತರ ಶವ ಪರೀಕ್ಷಾ ವರದಿ ನೀಡುತ್ತಾರೆ.

ವೈದ್ಯರು ನೀಡಿದ ವರದಿಯ ಅನ್ವಯ ಪೊಲೀಸರು ತನಿಖೆಗೆ ಮುಂದಾಗಿ ವಿಚಾರಣೆ ವೇಳೆ ಲಿವಿಂಗ್ ಟುಗೆದರ್ ಕಹಾನಿ ಬಯಲಾಗಿದೆ. ಈ ವೇಳೆ ಆರೋಪಿ(ಮೃತ) ಫಜಲುದ್ದೀನ್ ಬೇಬಿಯೊಂದಿಗೆ ಅನೈತಿಕ ಸಂಬoಧಹೊoದಿದ್ದು ಇದರಿಂದ ಕುಪಿತಗೊಂಡಿದ್ದ ಶಿಂಟೋ ಕುಡಿದು ಬಂದು ನಿತ್ಯ ಜಗಳವಾಡುತ್ತಿದ್ದನು. ಇದರಿಂದ ಕುಪಿತಗೊಂಡಿದ್ದ ಇಬ್ಬರು ಶಿಂಟೋನನ್ನು ಮುಗಿಸಲು ಕಾರ್ಯತಂತ್ರ ಎಣೆದು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕತ್ತು ಹಿಸುಕಿ ಸಾಯಿಸಿ ಎನು ಗೊತ್ತಿಲ್ಲದ ರೀತಿಯಲ್ಲಿ ಇದ್ದುದ್ದಾಗಿ ಆಗಿನ ವೃತ್ತ ನಿರೀಕ್ಷಕ ಶ್ರೀಧರ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಬೇಬಿ ಮತ್ತು ಫಜಲುದ್ದೀನ್ ರನ್ನು ತನಿಖೆಗೆ ಒಳಪಡಿಸಿದಾಗ ಬಾಯ್ಬಿಟ್ಟಿದ್ದರು.

ಆರೋಪಿಗಳ ಹೇಳಿಕೆ ಪಡೆದು ತಾರೀಕು ೨೫ ರಂದು ವರದಿ ಸಿದ್ದಪಡಿಸಿ ವಿರಾಜಪೇಟೆ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳಾದ ಬೇಬಿ ಮತ್ತು ಫಜಲುದ್ದೀನ್ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ದಿನಾಂಕ 13.5.2021 ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಲಾಗಿತ್ತು. ನಂತರ ವಿರಾಜಪೇಟೆಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ಇದೀಗ ಅಂತಿಮ ತೀರ್ಪನ್ನು ಪ್ರಕಟಿಸಿ ಕಲಂ ೩೦೨ ರೆ/ವಿ ೩೪ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ೨೫,೦೦೦ ದಂಡ ವಿಧಿಸಲಾಗಿದ್ದು, ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ ೬ ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಕಲಂ ೨೦೧ ಮತ್ತು ೩೪ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ೩ ವರ್ಷಗಳ ಕಾಲ ಸರಳ ಜೈಲು ಶಿಕ್ಷೆ, ೫೦೦೦ ರೂ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ೩ ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿರಾಜಪೇಟೆಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ನಟರಾಜು ಅವರು ಆರೋಪ ಸಾಭಿತಾದ ಹಿನ್ನಲೆ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ವಾದವನ್ನು ಮಂಡಿಸಿದ್ದರು.

(ಎರಡನೇ ಆರೋಪಿ ಫಜಲುದ್ದೀನ್ ಮೃತಪಟ್ಟಿದ್ದಾನೆ.)

Leave a Reply

Your email address will not be published. Required fields are marked *

error: Content is protected !!