
ಇಂದು ವೀಕೆಂಡ್ ಹಿನ್ನೆಲೆ ಬೈಕ್ ಏರಿ ಲಾಂಗ್ ಡ್ರೈವ್ಗೆ ಹೊರಟ್ಟಿದ್ದವರು ಮಸಣ ಸೇರಿದ ಪಿಯು ವಿದ್ಯಾರ್ಥಿಗಳು.
ಲಾಂಗ್ ಡ್ರೈವ್ ಹೋದ ಮೂವರು ಸ್ನೇಹಿತರ ಪಾಲಿಗೆ ಅದು ಲಾಸ್ಟ್ ಡ್ರೈವ್ ಆಗಲು ಕಾರಣ ಭೀಕರ ಅಪಘಾತ. ಡೆಡ್ಲಿ ಆಕ್ಸಿಡೆಂಟ್ ಗೆ ಸ್ಥಳದಲ್ಲೇ ಮೂವರು ದುರಂತ ಅಂತ್ಯವಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದ ಅಗಲಕೋಟೆ ಬಳಿ ಘಟನೆ ನಡೆದಿದೆ.
ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.
ಇಂದು ಬೆಳಗ್ಗೆ 11: 20ರ ಸಮಯ ಹೆದ್ದಾರಿಯಲ್ಲಿ ಟಿಪ್ಪರ್ ಸೇರಿದಂತೆ ಬೈಕ್ಗಳು ಸಹ ಎಂದಿನಂತೆ ಸಂಚರಿಸುತ್ತಿದ್ದವು. ಇದೇ ವೇಳೆ ಒಂದು ಬದಿಯಲ್ಲಿ ಹೋಗುತ್ತಿದ್ದ ಈ ಮೂವರು ಯುವಕರಿದ್ದ ಬೈಕ್ ಅತಿ ವೇಗದಲ್ಲಿ ಬಂದು ನೋಡ ನೋಡುತ್ತಿದ್ದಂತೆ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ನುಗ್ಗಿ, ನೇರವಾಗಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಮೂವರು ಯುವಕರ ದೇಹಗಳು ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೌಸೀಪ್(19), ಶ್ರೀನಿವಾಸ್(19) ಮತ್ತು ಮಣಿಕಂಠ(20) ಮೃತರು.
ಈ ಮೂವರು ಮೂಲತಃ ಯಲಹಂಕದ ಹುಣಸಮಾರನಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು. ಈ ಮೂರು ಜನ ಸ್ನೇಹಿತರು ಇಂದು ಬೆಳಗ್ಗೆ ವೀಕೆಂಡ್ ಅಂತ ಲಾಂಗ್ ಡ್ರೈವ್ಗೆ ಪ್ಲ್ಯಾನ್ ಮಾಡಿ, ಅದರಂತೆ ಒಂದೇ ಬೈಕ್ನಲ್ಲಿ ಹೊರಟಿದ್ದಾರೆ. ಹೊಸಕೋಟೆಯ ಕಂಬಳಿಪುರದ ಕಾಟೇರಮ್ಮ ದೇವಸ್ಥಾನಕ್ಕೆ ಹೋಗಿದ್ದ ಸ್ನೇಹಿತರು ವಾಪಸ್ ಯಲಹಂಕದತ್ತ ಮರಳುತ್ತಿದ್ದ ವೇಳೆ ದೇವನಹಳ್ಳಿ ಹೊರವಲಯದ ಬೂದಿಗೆರೆ ರಸ್ತೆಯ ಅಗಲಕೋಟೆ ಬಳಿ ರಸ್ತೆ ತಿರುವಿನಲ್ಲೂ ವೇಗವಾಗಿ ಬೈಕ್ ಓಡಿಸಿದ್ದಾರೆ. ಹೀಗಾಗಿ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡು ಒಂದು ಬದಿಯ ರಸ್ತೆಯಿಂದ ಮತ್ತೊಂದು ಬದಿಯ ರಸ್ತೆ ಹಾರಿದ್ದು, ಈ ವೇಳೆ ಬರುತ್ತಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದಿದೆ.
ಇನ್ನು ಡಿಕ್ಕಿ ರಭಸಕ್ಕೆ ಹೆಲ್ಮೆಟ್ ಹಾಕದ ಕಾರಣ ಯುಕರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪಿದ್ದಾರೆ.
ಮೆಲ್ನೋಟಕ್ಕೆ ಬೈಕ್ ಸವಾರ ಅತಿವೇಗ ಹಾಗೂ ಹೆಲ್ಮೆಟ್ ಹಾಕದಿರುವುದು ಮೂವರ ದುರಂತ ಅಂತ್ಯಕ್ಕೆ ಕಾರಣವಾಗಿದೆ ಅಂತ ಪೊಲೀಸರು ಶಂಕಿಸಿದ್ದಾರೆ. ಹಿಟ್ ಆ್ಯಂಡ್ ರನ್ ಮಾಡಿ ಎಸ್ಕೇಪ್ ಆಗಿರುವ ಟಿಪ್ಪರ್ ಪತ್ತೆಗೂ ಪೊಲೀಸರು ಮುಂದಾಗಿದ್ದು, ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.