
ಕೋಲಾರ: ಭೋವಿ ಜನಾಂಗವು ಹಿಂದಿನಿಂದಲೂ ವಿದ್ಯಾಭ್ಯಾಸದ ಕಡೆ ಗಮನ ಹರಿಸದೆ ಕಲ್ಲು, ಮಣ್ಣು, ಕೆರೆ ಕಟ್ಟೆಗಳನ್ನು ಕಟ್ಟುವ ಕೆಲಸವನ್ನು ಮಾಡಿಕೊಂಡು ಜೀವನ ಮಾಡಿಕೊಂಡು ಬಂದವರರು ಯಾರು ಕೂಡ ದೊಡ್ಡ ಅಧಿಕಾರಿಗಳಾಗಲಿಲ್ಲ ಜನಾಂಗವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಭೋವಿ ಸಮುದಾಯಕ್ಕೆ ಎಲ್ಲಾ ರೀತಿಯ ಸಹಾಯ ಮಾಡಬೇಕು ಸಮುದಾಯವು ಮೈಸೂರಿನ ಕೆಆರ್‌ಎಸ್ ಜಲಾಶಯ ಕಟ್ಟಿದ್ದಾರೆ ಅಂತಹ ಶಾಶ್ವತವಾಗಿ ಉಳಿಯುವಂತಾ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದರು.
ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನರಸಾಪುರ ಬಳಿ ಕಲ್ಲಿನ ಬ್ಲಾಕ್ ಗಳನ್ನು ಭೋವಿ ಸಮುದಾಯಕ್ಕೆ ಕೊಡಲು ಸೂಚನೆ ಕೊಡಬೇಕು. ಸಮುದಾಯದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಎರಡನೇ ಹಾಗೂ ನಾಲ್ಕನೆಯ ಶನಿವಾರ ಅರ್ಧ ದಿವಸ ಮಾತ್ರ ಕೆಲಸ ಮಾಡಿಸಬೇಕು ಪೌರಕಾರ್ಮಿಕರ ಮಕ್ಕಳಿಗೆ ನೆರವು ನೀಡಲು ಸಿಎಸ್ ಆರ್ ಅನುದಾನವನ್ನು ಆರೋಗ್ಯ, ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಕೆಲವರು ನನ್ನ ಮತ್ತು ಎಂಎಲ್ಸಿ ಅನಿಲ್ ಕುಮಾರ್ ಅವರನ್ನು ಜೋಡೆತ್ತೂ, ಲವಕುಶ, ಅಂತಾರೆ ಆದರೆ ನಾವು ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು ಆದರೆ ವ್ಯತ್ಯಾಸವಾಗಿ ಬೇರೆ ಬೇರೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೇವೆ ನನಗೆ ಜಾತಿ ಇಲ್ಲ 700 ವೋಟು ಇಟ್ಟುಕೊಂಡು ಏನು ಮಾಡುವುದು ಆದರೂ ಕೋಲಾರ ಕ್ಷೇತ್ರದಲ್ಲಿ ಗೆದ್ದಿದ್ದೇನೆ ನಿಮ್ಮಷ್ಟು ಸಮುದಾಯದಷ್ಟು ಬಲ ನನಗೆ ಇದ್ದಿದ್ದರೆ ಏನು ಬೇಕಾದರೂ ಮಾಡಬಹುದು ಎಂದರು.
ಇವತ್ತು ಕೆಲವು ಹಿರಿಯ ನಾಯಕರು ಈ ಕಾರ್ಯಕ್ರಮಕ್ಕೆ ಬಂದಿಲ್ಲ ಚುನಾವಣೆ ಬಂದಾಗ ಹೊಡೆದಾಡೋಣ. ಆದರೆ ಸಮಾಜದ ಕಾರ್ಯಕ್ರಮದಲ್ಲಿ ಒಂದಾಗಿ ಒಗ್ಗಟ್ಟನ್ನು ಪ್ರದರ್ಶಿಸಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ ಸಮಾಜದ ಕುರಿತು ಜಾಗೃತಿ ಮೂಡಿಸಬೇಕು. ವಿವಿಧ ಒಗ್ಗಟ್ಟಿನ ಕೊರತೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಕುಲ ಕಸುಬು ಬಿಟ್ಟು ಬೇರೆ ದಿಕ್ಕಿನಲ್ಲಿ ಆಲೋಚಿಸುವ ಅಗತ್ಯವಿದೆ ಆದರೆ, ಈ ದೇಶದಲ್ಲಿ ಮಾನಸಿಕ ಗುಲಾಮಿಗಿರಿ ನೆಲೆಸಿದೆ ಅದರಿಂದ ಹೊರಬರಬೇಕಿದೆ. ಇದಕ್ಕೆ ಶಿಕ್ಷಣ ಅಗತ್ಯ ಕೌಶಲ್ಯ ಕಲಿಸಬೇಕು ಇದು ವ್ಯವಸ್ಥೆಯ ಜವಾಬ್ದಾರಿಯಾಗಬೇಕು ಎಂದರು.
ಭೋವಿ ಸಮಾಜವು ಶ್ರಮ ಸಂಸ್ಕೃತಿಯಡಿ ಬರುವ ಸಮುದಾಯವಿದು. ಮನೆ ಕಟ್ಟುವ ಈ ಸಮುದಾಯದ ಆ ಮನೆಯೊಳಗೆ ಹೋಗಲು ಬಿಡಲ್ಲ. ನೀತಿ ರೂಪಿಸುವ ಮಟ್ಟಕ್ಕೆ ಈ ಸಮುದಾಯದವರು ಬೆಳೆದಿಲ್ಲ. ಮಾನವ ವಿರೋಧಿ ಸಂಸ್ಕೃತಿಯಲ್ಲಿ ಯಾವುದೇ ಬೆಳವಣಿಗೆ, ಪ್ರಗತಿ ಕಾಣುವುದಿಲ್ಲ ಜಾತಿ ಎನ್ನುವದು ನಮ್ಮ ಸಾಮರ್ಥ್ಯ, ಯೋಗ್ಯತೆಯ ಅಳೆಯುವ ಮಾನದಂಡ ಅಲ್ಲ. ಅದಕ್ಕೆ ಆತ್ಮವಿಶ್ವಾಸ ಇರಬೇಕು ದಮನಿತ ಸಮಾಜದ ಮುಖ್ಯ ಸಮಸ್ಯೆ ಎಂದರೆ ತಾವು, ತಮ್ಮ ಕುಟುಂಬ ಮಾತ್ರ ಬೆಳೆಯಬೇಕು. ಉಳಿದವರ ಬಗ್ಗೆ ಕಾಳಜಿ ಇಲ್ಲ. ತಮ್ಮ ಜೊತೆಗೆ ಕರೆದುಕೊಂಡು ಹೋಗುವ ಇಚ್ಛಾಶಕ್ತಿ ಕಳೆದು ಕೊಳ್ಳುತ್ತಿದ್ದೇವೆ. ಸ್ವಾರ್ಥ ಬಿಡಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಭೋವಿ ಸಮುದಾಯ ಎಂದರೆ ಶ್ರಮಿಕ ಸಮಾಜ. ಹೆಚ್ಚು ಕೆರೆ ಇರುವ ಜಿಲ್ಲೆ. ಅದಕ್ಕೆ ಕಾರಣ ಭೋವಿ ಸಮಾಜ ಈಗ ಯಂತ್ರೋಪಕರಣಗಳು ಇದ್ದರೂ ಹೊಸದಾಗಿ ಯಾವುದೇ ಕೆರೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಬೇರೆ ರಾಜ್ಯಗಳಲ್ಲಿ ಭೋವಿ ಸಮಾಜಕ್ಕೆ ಮೀಸಲಾತಿ ಇಲ್ಲ ಕರ್ನಾಟಕದಲ್ಲಿ ಸಮಾಜಕ್ಕೆ ಮೀಸಲಾತಿ ಇದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿದರು, ಉಪನ್ಯಾಸಕ ಡಾ.ಅನಿಲ್ ಕುಮಾರ್ ಸಿದ್ದರಾಮೇಶ್ವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಸದಸ್ಯ ಗಣೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎ.ಅಜಯ್ ಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಸಮುದಾಯದ ಮುಖಂಡರಾದ ಎಸ್.ವಿ ಲೋಕೇಶ್, ಎಸ್.ಚೌಡಪ್ಪ, ನುಕ್ಕನಹಳ್ಳಿ ಶ್ರೀನಿವಾಸ್ ಸೇರಿದಂತೆ ಮುಂತಾದವರು ಇದ್ದರು.