ಕೋಲಾರ ಕ್ಷೇತ್ರದಲ್ಲಿ 15.19 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕೋಲಾರ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಷ್ಟೇ ಅಭಿವೃದ್ದಿ ಕೆಲಸ ಮಾಡಿದರೂ ಅದನ್ನು ಸಹಿಸದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಅವರಿಗೆ ಏನಾದರೂ ಧೈರ್ಯ ಇದ್ದರೆ ನೇರವಾಗಿ ಬಂದು ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಪರಿಶೀಲನೆ ನಡೆಸಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ವಿರೋಧಿಗಳಿಗೆ ಸವಾಲು ಹಾಕಿದರು

ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಸುಮಾರು 15 .70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ ಕೆಲವು ವಿನಾಕಾರಣ ಅಭಿವೃದ್ಧಿಗೆ ತೊಂದರೆ ಕೊಡಲು ಹೊರಟಿದ್ದಾರೆ ಜೊತೆಗೆ ಜನರ ಮಧ್ಯೆ ಸುಳ್ಳು ಹೇಳುವ ಮೂಲಕ ಅಭಿವೃದ್ಧಿ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಅಂತರವನ್ನು ನಂಬಬೇಡಿ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು. ನಿಮಗೆ ಯಾರು ಒಳ್ಳೆಯವರು ಅಂತ ಅನಿಸುತ್ತಾರೋ ಮತ್ತು ಅಭಿವೃದ್ದಿ ಪರ ಕೆಲಸ ಮಾಡುತ್ತಾರೆ ಅವರಿಗೆ ಬೆಂಬಲಿಸಿ ಎಂದರು.

ಕೋಲಾರ ಜಿಲ್ಲೆಯಿಂದ ಪ್ರತ್ಯೇಕವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಅಭಿವೃದ್ಧಿಗೆ ಅಧ್ಯತೆ ನೀಡಲಾಗಿದೆ ಕೋಲಾರ ಬೆಂಗಳೂರಿಗೆ ಹತ್ತಿರ ಇದ್ದರೂ ಅಭಿವೃದ್ಧಿ ಕಾಣಲಿಲ್ಲ ಕಾಂಗ್ರೆಸ್ ಸರ್ಕಾರದಿಂದ ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ವಿಶೇಷ ಅನುದಾನ 100 ಕೋಟಿ ಅನುಮೋದನೆಯಾಗಿದೆ ಜೊತೆಗೆ ಎತ್ತಿನಹೊಳೆ ಯೋಜನೆಯಲ್ಲಿ30 ಕೋಟಿ ಬಿಡುಗಡೆ ಮಾಡಲಾಗಿದೆ ಅದರಲ್ಲಿ 12.50 ಕೋಟಿ ರಸ್ತೆಗೆ ಉಳಿದ 17.50 ಕೋಟಿ ಕೆರೆಗಳ ಅಭಿವೃದ್ಧಿಗೆ ನೀಡಲಾಗುತ್ತದೆ ಎಂದರು.

ಕಾಮಗಾರಿಗಳ ವಿವರ…

*ಲೆಕ್ಕ ಪರಿಶೋಧನಾ ಇಲಾಖೆ ಕಛೇರಿ ನೂತನ ಕಟ್ಟಡ ಕುಡಾ ಬಡಾವಣೆ 1.50 ಕೋಟಿ,
*ಈಜುಕೊಳ ಶಂಕುಸ್ಥಾಪನೆ ಜಿಲ್ಲಾ ಒಳಾಂಗಣ ಕ್ರೀಡಾಂಗಣ 4.70ಕೋಟಿ,
* ಯಡಹಳ್ಳಿ ಎಸ್ಟಿಪಿ ಟ್ಯಾಂಕ್ ನಿರ್ಮಾಣ ಮತ್ತು ಎಫ್ಎಸ್ಟಿಪಿ ಪ್ಯಾಂಟ್ 60 ಲಕ್ಷ ಮತ್ತು ಸಿಸಿ ರಸ್ತೆಗೆ 35 ಲಕ್ಷ,
*ತೊರದೇವಂಡಹಳ್ಳಿ ರಸ್ತೆಗೆ19 ಲಕ್ಷ,
*ಮಲ್ಲಂಡಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ಲೈಟ್ 5 ಲಕ್ಷ, *ಸೀತಿ ದೇವಸ್ಥಾನ ಡಬಲ್ ಸಿ.ಸಿ.ರಸ್ತೆಗೆ 1.50 ಕೋಟಿ, *ನಾಚಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ಲೈಟ್ 5 ಲಕ್ಷ, *ಕೃಷ್ಣಾಪುರ-ಚಿಂತಾಮಣಿ ಗಡಿ ರಸ್ತೆಗೆ 80 ಲಕ್ಷ, *ಅಮ್ಮನಲ್ಲೂರು ಗ್ರಾಮದಲ್ಲಿ ಸಿಸಿ ರಸ್ತೆಗೆ 40 ಲಕ್ಷ, *ಕ್ಯಾಲನೂರು, ಅಮ್ಮನಲ್ಲೂರು, ಚಲ್ದಿಗಾನಹಳ್ಳಿ, ಪಾಡಿಗಾನಹಳ್ಳಿ ರಸ್ತೆಗೆ 3 ಕೋಟಿ,
*ಬೀಚಗೊಂಡಹಳ್ಳಿ-ಚನ್ನಸಂದ್ರ ರಸ್ತೆಗೆ 1ಕೋಟಿ, *ಉರಟಿ ಅಗ್ರಹಾರ-ಚನ್ನಸಂದ್ರ ರಸ್ತೆಗೆ 1 ಕೋಟಿ ಸೇರಿದಂತೆ ಒಟ್ಟು 15.17 ಕೋಟಿಗಳಿಗೆ ಚಾಲನೆ ನೀಡಿದರು‌

ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಎಂಎಲ್ಸಿಗಳಾದ ಎಂ.ಎಲ್ ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಗ್ರಾಪಂ ಸದಸ್ಯ ಕಡಗಟ್ಟೂರು ದೇವರಾಜ್, ಮೇಡಿಹಾಳ ಮುನಿಆಂಜಿನಪ್ಪ, ರೈತ ಸಂಘದ ಮುಖಂಡ ಕಲ್ವಮಂಜಲಿ ರಾಮುಶಿವಣ್ಣ, ಮಲ್ಲಂಡಹಳ್ಳಿ ಪ್ರಕಾಶ್, ಬೆಟ್ಟಹೊಸಪುರ ಜಗನ್, ನಾಚಹಳ್ಳಿ ದೇವರಾಜ್, ಚನ್ನಸಂದ್ರ ಉಪಾಧ್ಯಕ್ಷ ಮುನಿರಾಜು, ರಾಜಕಲ್ಲಹಳ್ಳಿ ಶ್ರೀನಿವಾಸ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!